ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧ?
ಹಾವೇರಿ: ಜಿಲ್ಲೆಯ ಎಲ್ಲ ಆರೂ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿವೆ. ರುದ್ರಪ್ಪ ಲಮಾಣಿ (ಹಾವೇರಿ), ಬಿ.ಸಿ. ಪಾಟೀಲ (ಹಿರೇಕೆರೂರು), ಬಸವರಾಜ ಶಿವಣ್ಣನವರ (ಬ್ಯಾಡಗಿ), ಅಜ್ಜಂಪೀರ ಖಾದ್ರಿ (ಶಿಗ್ಗಾಂವಿ), ಮನೋಹರ ತಹಸೀಲ್ದಾರ (ಹಾನಗಲ್ಲ) ಹಾಗೂ ಕೆ.ಬಿ. ಕೋಳಿವಾಡ (ರಾಣಿಬೆನ್ನೂರು) ಹೆಸರುಗಳು ಅಂತಿಮಗೊಂಡಿವೆ ಎಂದು ತಿಳಿದು ಬಂದಿದೆ.