ಕೆಜೆಪಿಯಿಂದ ಸಜ್ಜನರ ಕಣಕ್ಕೆ
ಬ್ಯಾಡಗಿ: ಬ್ಯಾಡಗಿ ತಾಲೂಕು ವಿಧಾಸಭೆ ಕ್ಷೇತ್ರದ ಕೆಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯನ್ನಾಗಿ ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರನ್ನು ಆಯ್ಕೆ ಮಾಡಲಾಗಿದೆ.
ಸೋಮವಾರ ಪಟ್ಟಣದ ಶಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ಕಾರ್ಯಕರ್ತರ ಸಮಾವೇಶದಲ್ಲಿ ಸಜ್ಜನರ ಆಯ್ಕೆ ನಡೆಯುತ್ತಿದ್ದಂತೆ ಎಲ್ಲೆಡೆ ಜಯಕಾರದ ಘೋಷಣೆಗಳು ಕೇಳಿ ಬಂದವು.
ಹಾವೇರಿ, ರಾಣಿಬೆನ್ನೂರು ಸೇರಿದಂತೆ ಬ್ಯಾಡಗಿ ವಿಧಾನಸಭೆ ಕ್ಷೇತ್ರದ ಎಲ್ಲ ಗ್ರಾಮಗಳ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಪಾಲ್ಗೊಂಡು ಸಜ್ಜನರ ಆಯ್ಕೆ ಸ್ವಾಗತಿಸುವ ಮೂಲಕ ಚುನಾವಣೆಗೆ ತಮ್ಮ ಅಪಾರ ಬೆಂಬಲ ವ್ಯಕ್ತಪಡಿಸಿದರು.
ಪಟ್ಟಣದ ಕೆಜೆಪಿಯ ಹಿರಿಯ ಮುಖಂಡ ಹಾಗೂ ಮಾಜಿ ಪುರಸಭೆ ಅಧ್ಯಕ್ಷ ಕನ್ನಪ್ಪ ಕೊಪ್ಪದ ತಮ್ಮ ಅಭಿಪ್ರಾಯದಲ್ಲಿ ಹಂಚಿಕೊಂಡರು. ಇದೇ ವೇಳೆ ಮಾಜಿ ಶಾಸಕರು ತಮ್ಮ ವೈಯಕ್ತಿಕ ಕಾರಣಗಳಿಂದ ಸ್ಪರ್ಧಿಸಲು ಹಿಂದೇಟು ಹಾಕಿದ್ದರು. ಅವರೆ ಹೇಳಿರುವಂತೆ ಸರ್ವಸಮ್ಮತವಾಗಿ ಶಿವರಾಜ ಸಜ್ಜನರೇ ಈ ಕ್ಷೇತ್ರದ ಕೆಜೆಪಿ ಚುನಾವಣೆ ಅಭ್ಯರ್ಥಿ ಎಂದು ಇದೇ ಸಂದರ್ಭದಲ್ಲಿ ಘೋಷಿಸಿದರು.
ಸಭೆ ಅಧ್ಯಕ್ಷತೆ ವಹಿಸಬೇಕಾಗಿದ್ದ ಮಾಜಿ ಶಾಸಕ ಸುರೇಶಗೌಡ ಪಾಟೀಲ ಗೈರು ಹಾಜರಾಗಿದ್ದರು.
ಶಿವರಾಜ ಸಜ್ಜನರ ತಾವು ಮೂರು ದಶಕಗಳ ಕಾಲ ರಾಜಕೀಯ ರಂಗದಲ್ಲಿ ಬಹುತೇಕ ಸಾಕಷ್ಟು ಸೇವೆಗೈದಿದ್ದು, ಬ್ಯಾಡಗಿ ಮತಕ್ಷೇತ್ರದ ಎಲ್ಲೆಡೆ ಅಭಿವೃದ್ಧಿಗಾಗಿ ತಮ್ಮ ಅನುದಾನ ನೀಡಲಾಗಿದೆ. ಮಾಜಿ ಸಚಿವ ಉದಾಸಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಸಾಧನೆಯೇ ನಮಗೆ ಶ್ರೀರಕ್ಷೆಯಾಗಲಿದೆ ಎಂದರು. ಈಗಾಗಲೇ ಮಾಜಿ ಶಾಸಕರು ಶಾಸಕರು 700 ಕೋಟಿ ಅನುದಾನ ಖರ್ಚು ಮಾಡುವ ಮೂಲಕ ಕ್ಷೇತ್ರವನ್ನು ಪೂರ್ಣ ಅಭಿವೃದ್ಧಿ ಮಾಡಿದ್ದಾರೆ ಎಂದರು. ವಿಧಾನ ಕ್ಷೇತ್ರದ ಎಲ್ಲ ಮತದಾರರು ಕೆಜೆಪಿ ಗೆಲುವಿಗೆ ಅವಿರತ ಪ್ರಯತ್ನ ನಡೆಸಬೇಕು. ಹಾಗೂ ಯಡಿಯೂರಪ್ಪರ ಕೈಬಲಪಡಿಸಲು ತಮ್ಮನ್ನು ಶಾಸಕನ್ನಾಗಿ ಆಯ್ಕೆಗೊಳಿಸುವಂತೆ ಮನವಿ ಮಾಡಿದರು.
ಶಿವರಾಜ ಸಜ್ಜನರ ಕೆಜೆಪಿ ಅಭ್ಯರ್ಥಿ ಎಂದು ಘೋಷಣೆಯಾಗುತ್ತಿದ್ದಂತೆ ಏ. 2ರ ಬೆಳಗ್ಗೆ 10 ಗಂಟೆಗೆ ತಾಲೂಕಿನ ಕದರಮಂಡಲಗಿ ಆಂಜನೇಯ ದೇವರ ದರ್ಶನದ ಮೂಲಕ ಆರಂಭಿಸಲಾಗುವುದು ಎಂದು ಕೆಜೆಪಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ತಿಳಿಸಿದರು. ಮೈಲೆಪ್ಪ ಗುಡಗೂರು, ಗಂಗಣ್ಣ ಎಲಿ, ರಾಜೇಂದ್ರಣ್ಣ ಹಾವೇರಿ, ರವಿ ಪೂಜಾರ, ರವೀಂದ್ರ ಪಟ್ಟಣಶೆಟ್ಟಿ ಇತರರಿದ್ದರು.