ಮಕ್ಕಳನ್ನು ಟೀವಿಯಿಂದ ದೂರವಿಡಿ: ಮಡಿವಾಳರ
ನರಗುಂದ: ಆಧುನಿಕ ಜಗತ್ತಿನಲ್ಲಿ ಟೀವಿ ಹಾವಳಿಯಿಂದ ಯುವ ಜನಾಂಗ ಮತ್ತು ವಿದ್ಯಾರ್ಥಿಗಳು ದಾರಿ ತಪ್ಪುತ್ತಿದ್ದಾರೆ. ವಿದ್ಯಾರ್ಥಿಗಳು ಇವುಗಳಿಂದ ದೂರವಿರುವಂತೆ ನಿವೃತ್ತ ಶಿಕ್ಷಕ ಜಿ.ಆರ್. ಮಡಿವಾಳರ ಹೇಳಿದರು. ತಾಲೂಕಿನ ರಡ್ಡೇರ ನಾಗನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2012ಟ 13ನೇ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ವರ್ಗಾವಣೆಗೊಂಡ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸನ್ಮಾನ ಸ್ವೀಕರಿಸಿದ ನಿವೃತ್ತ ಶಿಕ್ಷಕ ಎಸ್.ಬಿ. ದಾಸರ ಮಾತನಾಡಿದರು. 7ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಎಸ್.ಡಿಎಂಸಿ ಅಧ್ಯಕ್ಷ ಬಿ.ಜಿ. ಪಾಟೀಲ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿದರು.