ಸಾಮಾಜಿಕ ಕಳಕಳಿಯಿಂದ ಕಾರ್ಯನಿರ್ವಹಿಸಿ
ಕನ್ನಡಪ್ರಭ ವಾರ್ತೆ, ಹಾವೇರಿ, ಏ. 1
ನಿಜಶರಣ ಅಂಬಿಗರ ಚೌಡಯ್ಯ ಗಂಗಾಮತಸ್ಥರ ಜಿಲ್ಲಾ ಸಮಿತಿಯಿಂದ ಇತ್ತೀಚೆಗೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿದ ಹಾಗೂ ವಿಜೇತ ಸದಸ್ಯರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಶಾಂತಮುನಿ ಶ್ರೀಗಳು ಮಾತನಾಡಿ, ಸಾಮಾಜಿಕ ಕಳಕಳಿ ಹಾಗೂ ಬದ್ಧತೆಗಳನ್ನು ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿ ಚಿಂತನೆಯೊಂದಿಗೆ ಕಾರ್ಯನಿರ್ವಹಿಸುವಂತೆ ಸಲಹೆ ಮಾಡಿದರು.
ಈ ಸಂದರ್ಭ ಸಂಘಟನೆ ಜಿಲ್ಲಾಧ್ಯಕ್ಷ ಶಿವಶಂಕರ ಬಾರ್ಕಿ, ಸುರೇಶ ಶಿವಣ್ಣನವರ, ಮಂಜುನಾಥ ಸುಣಗಾರ, ಬಸವರಾಜ ಕಳಸದ, ರಮೇಶ ಗುಳೇದ, ಹೊನ್ನಪ್ಪ ಕುದರಿಹಾಳ, ನಾಗೇಂದ್ರ ತುಮರಿಕೊಪ್ಪ, ಫಕ್ಕೀರಪ್ಪ ತುಮ್ಮಿನಕಟ್ಟಿ, ಕೃಷ್ಣಮೂರ್ತಿ ವಡ್ನಿಕೊಪ್ಪ, ತಮ್ಮಣ್ಣ ಆರೇಗೊಪ್ಪ, ರಾಮಣ್ಣ ತೋಟಗಂಟಿ, ಕೇಶವ ಶೇಷಗಿರಿ, ಮಂಜುನಾಥ ಭೋವಿ, ಪ್ರಕಾಶ ಅಂಬಿಗೇರ, ಸಿ.ಎಸ್. ಶೇಷಗಿರಿ, ಹುಲ್ಲಪ್ಪ ಜಾಡರ, ಇನ್ನಿತರರು ಉಪಸ್ಥಿತರಿದ್ದರು.