ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಸಮರ್ಪಕ ಕಾರ್ಯವೈಖರಿಗೆ ಖಂಡನೆ

Vishwanath S
Updated On : 3 Apr 2013, 10:49 am

ಹಾವೇರಿ: ನೂತನ ಮರಳು ನೀತಿ ಹಾಗೂ ಜಿಲ್ಲಾ ಮರಳು ಮಾನಿಟರಿಂಗ್ ಕಮಿಟಿಯ ಅಸಮರ್ಪಕ ಕಾರ್ಯವೈಖರಿಯಿಂದ ಹಾಗೂ ಮರಳು ಸಾಗಾಣಿಕೆ ಲಾರಿ ಚಾಲಕರು ಹಾಗೂ ಮಾಲೀಕರು ಸೇರಿ ಕಾರ್ಮಿಕರು ತೊಂದರೆ ಎದುರಿಸುವಂತಾಗಿದೆ ಎಂದು ಆರೋಪಿಸಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸುತ್ತಿದ್ದ ಮರಳು ಸಾಗಾಣಿಕೆ ಲಾರಿ ಚಾಲಕರು ಹಾಗೂ ಮಾಲೀಕರು ಮತ್ತು ಕಾರ್ಮಿಕರ ಅಹೋರಾತ್ರಿ ಪ್ರತಿಭಟನೆಗೆ 2ನೇ ದಿನಕ್ಕೆ ಕಾಲಿಟ್ಟ ಸಂದರ್ಭ ಜಿಲ್ಲಾಡಳಿತ ಸ್ಪಂದಿಸಿದೆ.
ಈ ಕುರಿತಂತೆ ಜಿಲ್ಲಾಡಳಿತ ಪರ ಮಂಗಳವಾರ ಪ್ರತಿಭಟನಾನಿರತ ಮರಳು ಲಾರಿ ಮಾಲೀಕರ ಸಂಘದವರ ಬಳಿ ಹೋಗಿ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡುವುದು ಹಾಗೂ ಪ್ರಸ್ತುತ ಸ್ಥಿತಿಯಲ್ಲೇ ತಮ್ಮ ವ್ಯಾಪಾರೋದ್ದಿಮೆ ಚೌಕಟ್ಟಿನಡಿಯಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಿದರಲ್ಲದೇ, ಚುನಾವಣೆ ಬಳಿಕ ಮರಳು ಲಾರಿ ಮಾಲೀಕರ ಸಭೆ ಕರೆದು ಅವರ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸುವುದಾಗಿ ಮನವಿ ಮಾಡಿದರು.
ಮನವಿ ಮೇರೆಗೆ ಸೋಮವಾರದಿಂದ ಕೈಗೊಳ್ಳಲಾಗಿದ್ದ ಪ್ರತಿಭಟನೆಯನ್ನು ಮರಳು ಲಾರಿ ಮಾಲೀಕರು ಹಿಂಪಡೆದಿರುವುದಾಗಿ ಸಂಘಟನೆ ಜಿಲ್ಲಾಧ್ಯಕ್ಷ ಜಗದೀಶ ಬೆಟಗೇರಿ ತಿಳಿಸಿದ್ದಾರೆ. ಸಹಾಯಕ ಅಭಿಯಂತರ ಶಿವಣ್ಣ, ಭೂ ವಿಜ್ಞಾನ ಇಲಾಖೆ ಹಿರಿಯ ಅಧಿಕಾರಿ ನಸ್ರುಲ್ಲಾ, ಇನ್ನಿತರರು ಜಿಲ್ಲಾಡಳಿತದ ಪರ ಭರವಸೆ ನೀಡಿದ್ದು, ಚುನಾವಣೆ ನಂತರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಲಾರಿ ಮಾಲೀಕರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಂತೆ ಜಿಲ್ಲಾಧ್ಯಕ್ಷ ಜಗದೀಶ ಬೆಟಗೇರಿ, ಉಪಾಧ್ಯಕ್ಷ ಮುರಿಗೆಪ್ಪ ನೀರಲಗಿ, ಕಾರ್ಯದರ್ಶಿ ಬಿ.ಬಿ. ಬೆಳಗಾವಪ್ಪ, ಪದಾಧಿಕಾರಿಗಳಾದ ಸುಭಾಸ ಮೈಲಾರ, ಚನ್ನಬಸಪ್ಪ ಚಿಕ್ಕಿ, ವಿರುಪಣ್ಣ ಯಲಿಗಾರ, ರುದ್ರಪ್ಪ ಹಾದಿಮನಿ, ಮಾಂತೇಶ ಹುಲ್ಲಾಳ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement