5, 6ರಂದು ರಥೋತ್ಸವ,ಸಾಮೂಹಿಕ ವಿವಾಹ
ಹಿರೇಕೆರೂರು: ತಾಲೂಕಿನ ಉಜನಿಪುರ ಗ್ರಾಮದಲ್ಲಿ ಏ. 5 ಹಾಗೂ 6ರಂದು ಶ್ರೀ ಉಜನೇಶ್ವರ, ಶ್ರೀ ಜಟ್ಟಿಲಿಂಗೇಶ್ವರ ದೇವರ ಮಹಾರಥೋತ್ಸವ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಏ. 5ರಂದು ಬೆಳಗ್ಗೆ 7 ಗಂಟೆಗೆ ಕಳಸ ಪೂಜೆ ಹಾಗೂ ಹೂವಿನ ರಥೋತ್ಸವ ಜರುಗುವುದು. 6ರಂದು ಬೆಳಗ್ಗೆ 8 ಗಂಟೆಗೆ ಗುಗ್ಗಳ ಕಾರ್ಯಕ್ರಮದೊಂದಿಗೆ ಶ್ರೀ ಉಜನೇಶ್ವರ, ಶ್ರೀ ಜಟ್ಟಿಲಿಂಗೇಶ್ವರ ದೇವರ ಮಹಾರಥೋತ್ಸವ ಜರುಗುವುದು. ಮಧ್ಯಾಹ್ನ 12.45ಕ್ಕೆ ಶ್ರೀ ಉಜನೇಶ್ವರ ಸಭಾ ಮಂಟಪದಲ್ಲಿ ರಟ್ಟೀಹಳ್ಳಿ ಕಬ್ಬಿಣಕಂಥಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಲಿದೆ ಎಂದು ದೇವಸ್ಥಾನ ಟ್ರಸ್ಟ್ ಕಮಿಟಿ ತಿಳಿಸಿದೆ.