ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಶಿಷ್ಯವೇತನ ವಿತರಣೆ ನಿರ್ಲಕ್ಷ್ಯ: ಪ್ರತಿಭಟನೆ

Vishwanath S
Updated On : 4 Apr 2013, 10:20 am

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಏ. 3
ಸರ್ಕಾರಿ ಕೈಗಾರಿಕಾ ತರಬೇತಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಮಂಜೂರಾದ ಶಿಷ್ಯವೇತನ ನೀಡಲು ಪ್ರಾಚಾರ್ಯರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿ ಇಲ್ಲಿನ ನೂರಾರು ವಿದ್ಯಾರ್ಥಿಗಳು ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ಹಾಗೂ ಕಚೇರಿಗೆ ಬೀಗ ಪ್ರತಿಭಟನೆ ನಡೆಸಿದರು.
ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಮಂಜೂರಾದ ಶಿಷ್ಯವೇತನ ನೀಡಲು ಪ್ರಾಚಾರ್ಯ ಆರ್.ಡಿ. ಮೊಕಾಶಿ ನಿರ್ಲಕ್ಷ್ಯ ತೊರುತ್ತಿದ್ದಾರೆ ಎಂದು ಆರೋಪಿಸಿ ಇಲ್ಲಿ ನೂರಾರು ವಿದ್ಯಾರ್ಥಿಗಳು ಅಧಿಕಾರಿಗಳಿಗೆ ಮುತ್ತಿಗೆ ಹಾಕಿ, ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಬಡ ಮಕ್ಕಳಿಗೆ ತಲುಪಿಸುತ್ತಿಲ್ಲ: ಪ್ರಾಚಾರ್ಯ ಆರ್.ಡಿ. ಮೊಕಾಶಿ ವಿದ್ಯಾರ್ಥಿ ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕಾಲೇಜಿನ ಹಲವು ಹಗರಣಗಳಿಗೆ ಕಾರಣರಾಗಿದ್ದಾರೆ. ಸರ್ಕಾರ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ನೆರವಾಗಲೆಂದು ಶಿಷ್ಯವೇತನ ನೀಡುವ ಮೂಲಕ ನೆರವಾಗುತ್ತಿದೆ. ಆದರೆ, ಇಲ್ಲಿನ ಪ್ರಾಚಾರ್ಯರು ಅರ್ಹ ವಿದ್ಯಾರ್ಥಿಗಳಿಗೆ ತಲುಪಿಸುತ್ತಿಲ್ಲ. ಹೀಗಾಗಿ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿದರು.
ಮೇಲಾಧಿಕಾರಿಗೆ ವರದಿ: ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಧಾರವಾಡ ಕೈಗಾರಿಕಾ ತರಬೇತಿ ಶಿಕ್ಷಣ ಇಲಾಖೆಯ ಜೆ.ಡಿ. ರಮೇಶ ದಾಖಲೆಗಳನ್ನು ಪರಿಶೀಲಿಸಿ ಮಾತನಾಡಿ, ಗೌರವ ಉಪನ್ಯಾಸಕರ ಗೌರವಧನ ಮತ್ತು ಶಿಷ್ಯವೇತನ ಮಂಜೂರಾಗಿದ್ದರೂ ಪ್ರಾಚಾರ್ಯರು ವಿಳಂಬ ಮಾಡಿದ್ದಾರೆ. ಸ್ಪಂದನಾ ಸಂಘಟನೆಗೆಂದು ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಿದ ಬಗ್ಗೆ ಮಾಹಿತಿ ನೀಡಿಲ್ಲ. ಎಂಇಎಸ್ ತರಬೇತಿಗೆಂದು ಸಂಗ್ರಹಿಸಿದ ಸುಮಾರು ರು. 3 ಲಕ್ಷದ ಬಗ್ಗೆ ನಿಖರ ಮಾಹಿತಿ ಇಲ್ಲ. ಅವುಗಳ ಕುರಿತು ಸಂಪೂರ್ಣ ಪರಿಶೀಲನೆ ನಡೆಸಿದಾಗ ಮೇಲ್ನೋಟಕ್ಕೆ ಅಕ್ರಮ ನಡೆದಿರುವುದು ಕಂಡು ಬರುತ್ತಿದೆ. ಹೀಗಾಗಿ ಕಾಲೇಜಿನ ಪ್ರಾಚಾರ್ಯ ಆರ್.ಡಿ. ಮೊಕಾಶಿ ಹಾಗೂ ಸಿಬ್ಬಂದಿ ಚವ್ಹಾಣ, ಹೋಸಪೇಟಿ, ಸಾತಗೊಂಡ ಎಂಬುವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳಿಗೆ ವರದಿ ಕಳುಹಿಸುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ಶಶಿಕುಮಾರ, ಸುಭಾಸ ಮಾದರ, ಮಲ್ಲೇಶಪ್ಪ ಗಣಪ್ಪನವರ, ಸೋಮಲಿಂಗಪ್ಪ ಕಾರಡಗಿ, ರವಿ ವಿರಪ್ಪನವರ, ಫಕ್ಕೀರೇಶ ಮರಡೂರ, ನಿರಂಜನ ಕಲ್ಲನಗೌಡರ, ಕೆ.ಎಚ್. ಹಂಸರಾಜ, ನಿಂಗಪ್ಪ ಯಲವಿಗಿ, ಎಂ.ಎನ್. ಇಂಗಳಗಿ, ದಾವಲ, ಜಾಫರ ಕುರಟ್ಟಿ, ಆಸಲಂ ನದಾಫ್, ವಿ.ಎಸ್. ಗಿರಿಮಠ, ಗೌರವ ಉಪನ್ಯಾಸಕರು ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement