12ರಿಂದ ವೀರಭದ್ರೇಶ್ವರ ಜಾತ್ರೆ
ರಾಣಿಬೆನ್ನೂರು: ತಾಲೂಕಿನ ಸುಕ್ಷೇತ್ರ ಚೌಡಯ್ಯದಾನಪುರದ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ಏ. 12 ಮತ್ತು 13ರಂದು ನಡೆಯಲಿದ್ದು, ಜಾತ್ರೋತ್ಸವದ ನೆತೃತ್ವವನ್ನು ಚೌಡಯ್ಯದಾನಪುರದ ಚಿತ್ರಶೇಖರ ಶಿವಾಚಾರ್ಯಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯಲಿದೆ.
12ರಂದು ಸಂಜೆ 4-30ಕ್ಕೆ ರಥೋತ್ಸವ, 13ರಂದು ಬೆಳಗ್ಗೆ 7-30ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾಲಕಿ ಉತ್ಸವ ನಡೆಯುವುದು. ಮಧ್ಯಾಹ್ನ 12ಕ್ಕೆ ಅಗ್ನಿ ಕುಂಡ ಹಾಯುವುದು, ಸಂಜೆ ಶಿವದೇವ ಯುವಕ ಮಂಡಳದಿಂದ ಮನರಂಜನೆ ಕಾರ್ಯಕ್ರಮ ನಡೆಯುವುದು. ಜಾತ್ರೆ ಅಂಗವಾಗಿ ಪ್ರಸಾದ ವ್ಯವಸ್ಧೆ ಮಾಡಲಾಗಿದ್ದು, ಸಾರ್ವಜನಿಕರು ಭಕ್ತರು ಸಹಕರಿಸಬೇಕೆಂದು ದೇವಸ್ಧಾನ ಸಮಿತಿ ಅಧ್ಯಕ್ಷ ವಿಧ್ಯಾಧರ ಒಡೆಯರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.