6 ದಿನಗಳ ಹೈನುಗಾರಿಕೆ ತರಬೇತಿ
ಗದಗ: ಧಾರವಾಡದ ಗೋದಿ ಸಂಶೋಧನಾ ಕೇಂದ್ರದ ಹಿಂಭಾಗದ ಕೃಷಿ ವಿಶ್ವ ವಿದ್ಯಾಲಯದ ಆವರಣದಲ್ಲಿರುವ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದಲ್ಲಿ ನಿಯಮಿತವಾಗಿ ರೈತ ಹಾಗೂ ರೈತ ಮಹಿಳೆಯರಿಗಾಗಿ ಹೈನುಗಾರಿಕೆ ತರಬೇತಿಗಳನ್ನು ಕೈಗೊಳ್ಳುತ್ತಿದೆ. ಏ. 15ರಿಂದ 20ರ ವರೆಗೆ ರೈತ, ರೈತ ಮಹಿಳೆಯರಿಗಾಗಿ 6 ದಿನಗಳ ಹೈನುಗಾರಿಕೆ ತರಬೇತಿಯನ್ನು ಪಶು ಆಸ್ಪತ್ರೆ ಆವರಣದಲ್ಲಿ ಆಯೋಜಿಸಲಾಗಿದೆ. ತರಬೇತಿಗೆ ಭಾಗವಹಿಸಲಿಚ್ಛಿಸುವವರು ಮತದಾರರ ಗುರುತಿನ ಚೀಟಿ ಅಥವಾ ರೇಷನ್ ಕಾರ್ಡ್‌ದೊಂದಿಗೆ ಹಾಜರಾಗಲು ಧಾರವಾಡದ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.