ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಂಚೆ ವಿಮೆ ಸೌಲಭ್ಯ ಪಡೆಯಿರಿ

Vishwanath S
Updated On : 6 Apr 2013, 11:55 am

ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಏ. 5
ನಮ್ಮ ಅವಲಂಬಿತರಿಗೆ ನೆರವಾಗುವ ಹಾಗೂ ಕುಟುಂಬದ ಭದ್ರತೆಯೊಂದಿಗೆ ಹೆಚ್ಚಿನ ಲಾಭ ಗಳಿಸುವ ಮೂಲಕ ಆದಾಯ ಪಡೆಯಲು ಭಾರತೀಯ ಅಂಚೆ ವಿಮೆ ಸೂಕ್ತ ಎಂದು ಹಾವೇರಿ ವಿಭಾಗದ ಅಂಚೆ ಅಧೀಕ್ಷಕ ಆರ್.ಜಿ. ಬ್ಯಾಟಪ್ಪನವರ ತಿಳಿಸಿದರು.
ತಾಲೂಕಿನ ಹಾದ್ರಿಹಳ್ಳಿ ಗ್ರಾಮದಲ್ಲಿ ಭಾರತೀಯ ಅಂಚೆ ಇಲಾಖೆ, ರಾಣೇಬೆನ್ನೂರ ಅಂಚೆ ನಿರೀಕ್ಷಕರ ಕಾರ್ಯಾಲಯ ಮತ್ತು ಹಾದ್ರಿಹಳ್ಳಿ ಶಾಖಾ ಅಂಚೆ ಕಚೇರಿ ವತಿಯಿಂದ ಜರುಗಿದ ಗ್ರಾಮೀಣ ಅಂಚೆ ವಿಮಾ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಕಡಿಮೆ ವಿಮಾ ಹಣ ಭರಣ ಮಾಡಿಕೊಂಡು ಅಧಿಕ ಲಾಭ ಕೊಡುವ ಅಂಚೆ ವಿಮೆ ವಿಶಿಷ್ಟವಾಗಿದೆ. ಈ ಬಗ್ಗ ಜನರಿಗೆ ತಿಳಿವಳಿಕೆ ನೀಡಬೇಕಿದೆ. ವಿವಿಧ ವಿಮಾ  ಕಂಪನಿಗಳಿಗಿಂತ ಶೇ. 50ರಷ್ಟು ಹೆಚ್ಚು ಬೋನಸ್ ನೀಡಿ, ಪಾಸ್ ಪುಸ್ತಕ, ಕಡಿಮೆ ಬಡ್ಡಿಯಲ್ಲಿ ಸಾಲ ಹಾಗೂ ಸರಳ ರೀತಿಯಲ್ಲಿ ವಿಮಾ ರಕ್ಷಣೆ ಇದರ ವಿಶೇಷತೆ. ಗ್ರಾಮೀಣ ಜನರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ತಾಲೂಕಿನ ಇಂಗಳಗೊಂದಿ ಅಂಚೆ ಕಚೇರಿಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಕರಬಸಪ್ಪ ಮಾರವಳ್ಳಿ ಇವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಗ್ರಾಪಂ ಉಪಾಧ್ಯಕ್ಷ ವಿ.ಸಿ. ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರಾದ ಹುಲಗಪ್ಪ ಕೊರವರ, ದೇವೇಂದ್ರಪ್ಪ ಮೇಗಳಮನಿ, ಹನುಮಂತಪ್ಪ ಬಣಕಾರ, ಬಸವಣ್ಣಪ್ಪ ಹೊಟ್ಟಿಗೌಡ್ರ, ಎಸ್‌ಡಿಎಂಸಿ ಅಧ್ಯಕ್ಷ ಉಮೇಶ ಹೊಟ್ಟಿಗೌಡ್ರ, ಸುರೇಶ ಮಾಳನಕೊಪ್ಪ, ಗಿರಿಯಪ್ಪ ಬಣಕಾರ, ಜೆ.ಡಿ. ನಿಂಗೋಜಿ, ಬಿ.ಎಂ. ಅಗಸರ, ಎ.ಎ. ಅತ್ತಾರ, ಕೆ.ಎಸ್. ಹೊಳಿಬಸಪ್ಪನವರ, ಎಲ್.ಸಿ. ಹಜೇರಿ, ಪಿ.ಎಂ. ಬೆನಕನಕೊಂಡ, ಎಂ.ಕೆ. ಕಮ್ಮಾರ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement