ಸಂಶಯ ವ್ಯಕ್ತಿಗಳ ಬಂಧನ
ರಾಣಿಬೆನ್ನೂರು: ಸ್ಥಳೀಯ ಶಹರ ಠಾಣೆ ವ್ಯಾಪ್ತಿಯ ಹಳೇ ಅಂತರವಳ್ಳಿ ರಸ್ತೆಯ ಅಯ್ಯಪ್ಪಸ್ವಾಮಿ ದೇವಸ್ಥಾನ ಬಳಿ ಗುರುವಾರ ಸಂಜೆ ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಾದ ಗಿರೀಶ ಕಲ್ಲಪ್ಪ ಕಲ್ಲೇದೇವರ, ಕುಮಾರ ಗೋವಿಂದಪ್ಪ ಡೊಗ್ಗೊಳ್ಳಿ ಅವರು ಮೂಲತಃ ರಾಣಿಬೆನ್ನೂರಿನ ತಳವಾರ ಓಣಿ ನಿವಾಸಿಗಳು ಎಂದು ತಿಳಿದು ಬಂದಿದೆ. ರಾಣಿಬೆನ್ನೂರು ಶಹರ ಠಾಣೆ ಅಪರಾಧ ವಿಭಾಗದ ಪಿಎಸ್ಐ ರೋಹಿಣಿ ಆರ್. ಪಾಟೀಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.