ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಉಪ ಕಸುಬಿನಿಂದ ಆರ್ಥಿಕ ಸ್ವಾವಲಂಬನೆ

Vishwanath S
Updated On : 7 Apr 2013, 11:17 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಏ. 6
ಗ್ರಾಮೀಣ ಮಹಿಳೆಯರು ಕೇವಲ ಕೃಷಿಯನ್ನು ಅವಲಂಬಿಸದೆ ಆರ್ಥಿಕ ಸ್ವಾವಲಂಬನೆ ಸಾಧಿಸಲು ಬೇರೆ ಉದ್ಯೋಗದಲ್ಲಿ ತೊಡಗುವಂತೆ ಎಪಿಎಂಸಿ ಸದಸ್ಯ ಜಗದೀಶ ಕಣಗಲಬಾವಿ ಕರೆ ನೀಡಿದರು.
ಶನಿವಾರ ತಾಲೂಕಿನ ಚಿಕ್ಕಬಾಸೂರ ಗ್ರಾಮದ ಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಹ್ಯಾಂಡ್ ಇನ್ ಹ್ಯಾಂಡ್ ಇಂಡಿಯಾ ಸಂಸ್ಥೆಯ ಆಶ್ರಯದಲ್ಲಿ ಮಹಿಳಾ ಸಂಘದ ಸದಸ್ಯರಿಗೆ ಹಮ್ಮಿಕೊಳ್ಳಲಾದ ತರಬೇತಿ ಶಿಬಿರದ ಮುಕ್ತಾಯ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇಡೀ ಕುಟುಂಬವೇ ದುಡಿಮೆಯಲ್ಲಿ ತೊಡಗಿದರೂ ದುಬಾರಿ ಕಾಲದಲ್ಲಿ ಜೀವನ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಮಹಿಳೆಯರು ಆರ್ಥಿಕ ಸಬಲೀಕರಣ ಹಾಗೂ ಸ್ವಾವಲಂಬನೆಗೆ ಸ್ವಯಂ-ಉದ್ಯೋಗ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.
ಮಹಿಳೆಯರು ಮನೆಯಲ್ಲೇ ಚಿಕ್ಕಪುಟ್ಟ ಕಸುಬುಗಳನ್ನು ರೂಢಿಸಿಕೊಳ್ಳುವುದು ಸೂಕ್ತ. ಸರ್ಕಾರ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ವಿವಿಧ ಯೋಜನೆಗಳಲ್ಲಿ ಮಹಿಳೆಯರ ಉದ್ಯೋಗಕ್ಕಾಗಿ ಒತ್ತು ನೀಡಿವೆ.
ಬ್ಯಾಂಕ್, ಇನ್ನಿತರ ಹಣಕಾಸು ಸಂಸ್ಥೆಗಳು ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲದ ಸೌಲಭ್ಯ ಕಲ್ಪಿಸಿವೆ ಎಂದರು.
ಜಯಮ್ಮ ಮಾತನಾಡಿ, ಕೌಶಲ್ಯ ತರಬೇತಿ, ಗ್ರಾಮೀಣ ಪ್ರದೇಶದ ಉದ್ಯಮಶೀಲತಾ ಬೆಳವಣಿಗೆ, ಆರ್ಥಿಕತೆ ಹೆಚ್ಚಿಸಲು ಜಿಲ್ಲಾದ್ಯಂತ ಸಂಸ್ಥೆ ನೆರವಿನಲ್ಲಿ ತರಬೇತಿ ಶಿಬಿರಗಳನ್ನು ನಡೆಸಲಾಗಿದೆ ಎಂದರು.
ಚಿಕ್ಕಬಾಸೂರ ಗ್ರಾಮದ 50ಕ್ಕೂ ಹೆಚ್ಚು ಮಹಿಳೆಯರು 3 ತಿಂಗಳ ತರಬೇತಿ ಪಡೆದಿದ್ದು, ಆರ್ಥಿಕ ಸ್ಥಿತಿಗತಿ ವೃದ್ಧಿಸಿಕೊಳ್ಳಲು ಉತ್ತಮ ಅವಕಾಶ ಒದಗಿಸಿದೆ. ಗ್ರಾಮೀಣ ಮಹಿಳೆಯರು ಕೇವಲ ಮನೆ ಕೆಲಸಕ್ಕೆ ಸೀಮಿತವಾಗದೆ ಇಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಸಂಸ್ಥೆಯ ವ್ಯವಸ್ಥಾಪಕ ಕಾಂತೇಶ ವಿ.ಸಿ., ಜಗದೀಶ ಎಚ್.ಎಚ್., ತರಬೇತುದಾರ ಹರೀಶಕುಮಾರ ರಿತ್ತಿ,  ಕೆ. ರಾಧಾ, ನಂದನಾ ಎನ್., ಮಹಿಳಾ ಸಂಘದ ಜಯಮ್ಮ ಮಠದ, ಶಿಲ್ಪಾ ಶೆಟ್ಟರ, ಪುಷ್ಪಾ ಕನವಳ್ಳಿ, ವನಜಾಕ್ಷಿ ಹಿರೇಮಠ, ಶಶಿಕಲಾ ಹೊಂಕಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement