ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಡ್ಡಾಯವಾಗಿ ಮತ ಚಲಾಯಿಸಿ

Vishwanath S
Updated On : 7 Apr 2013, 11:17 am

ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಏ. 6
ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳ ಪಾತ್ರ ಪ್ರಮುಖವಾಗಿದ್ದು, ಚುನಾವಣೆಗಳೇ ಪ್ರಜಾಪ್ರಭುತ್ವದ ಜೀವಾಳ. ಇದರಿಂದಾಗಿ ಕಡ್ಡಾಯವಾಗಿ ಮತ ಚಲಾಯಿಸಬೇಕೆಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಪಿ. ಗೌಡರ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕುವೆಂಪು ಸಭಾಭವನದಲ್ಲಿ ಶುಕ್ರವಾರ ಕಾಲೇಜು ವಿದ್ಯಾರ್ಥಿಗಳಿಗೆ ಬರುವ ವಿಧಾನಸಭಾ ಚುನಾವಣೆಯಲ್ಲಿ ಕಡ್ಡಾಯ ಹಾಗೂ ಪ್ರಾಮಾಣಿಕ ಮತ ಚಲಾಯಿಸುವ ಸಲುವಾಗಿ ಚುನಾವಣಾ ಜಾಗೃತಿ ಕಾರ್ಯಕ್ರಮದಲ್ಲಿ 'ಪ್ರಜಾಪ್ರಭುತ್ವದಲ್ಲಿ ಮತ ಚಲಾವಣೆ ಮಹತ್ವ' ಕುರಿತು ಮಾತನಾಡಿದರು.
ಚುನಾವಣೆಗಳು ಪ್ರಜಾಪ್ರಭುತ್ವದ ತೊಲೆಗಂಬಗಳಿದಂತೆ. ಇವುಗಳ ಆಧಾರದ ಮೇಲೆ ಶಾಸನ ಸಭೆಗಳು ರೂಪಗೊಳ್ಳುತ್ತವೆ. ಮಂತ್ರಿಮಂಡಲದ ಗೋಪುರ ಈ ಆಧಾರದ ಮೇಲೆ ನಿಂತಿರುತ್ತದೆ. ಕಾರಣ ಯುವಶಕ್ತಿಯು ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಪ್ರಜಾಪ್ರಭುತ್ವದ ಆಶಯ ಎತ್ತಿ ಹಿಡಿಯಿರಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಪ್ರಾಚಾರ್ಯ ಪ್ರೊ.ಎಲ್.ಎಂ. ಪೂಜಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಎಸ್.ಎಚ್. ದೊಡ್ಡಗೌಡರ ಕ್ರೀಡಾ ವಿಭಾಗದ ಡಿ.ಆರ್. ಪ್ರಸನಕುಮಾರ, ಸಾಂಸ್ಕೃತಿಕ ಸಂಯೋಜಕ ಎಫ್.ಎ.ಅತ್ತಾರ್ ಉಪಸ್ಥಿತರಿದ್ದರು. ಐ.ಎಂ. ತರೇದಳ್ಳಿ, ಶಿವಾನಂದ ಸಂಗಾಪುರ, ರೇವಣಸಿದ್ದಪ್ಪ ಕೆ.ಬಿ, ಆರ್.ಎಸ್. ಚಕ್ಕಿ, ಉಪನ್ಯಾಸಕರಾದ ಬಿ.ಎಸ್. ಮಲ್ಲೂರ, ಪರುಶರಾಮ ಕೊರವರ, ವೆಂಕಟೇಶ ಮತ್ತಿತರು ಉಪಸ್ಥಿತರಿದ್ದರು.
ವನಿತಾ ಗೊಂದಿ ಪ್ರಾಥಿಸಿದರು. ಶಿಲ್ಪಾ ಲಮಾಣಿ ನಿರೂಪಿಸಿದರು. ಎಸ್.ಎಚ್. ದೊಡ್ಡಗೌಡರ ಸ್ವಾಗತಿಸಿದರು.ಪ್ರಸನ್ನಕುಮಾರ ವಂದಿಸಿದರು.
ಪ್ರತಿಜ್ಞಾವಿಧಿ: ನಾನು ಮತ ಚಲಾಯಿಸುತ್ತೇನೆ ಹಾಗೂ ಪ್ರಾಮಾಣಿಕವಾಗಿ ಮತ ಚಲಾಯಿಸುತ್ತೇನೆ ಎಂದು ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಜ್ಞೆ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement