ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸೀರೆ ಹಂಚಲು ಯತ್ನ: ಪ್ರಕರಣ ದಾಖಲು

Vishwanath S
Updated On : 7 Apr 2013, 11:21 am

ರಾಣಿಬೆನ್ನೂರು: ಮೇ. 5ರಂದು ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಗೆಲವು ಸಾಧಿಸಲು ಮತದಾರರ ಮನ ಒಲಿಸುವುದಕ್ಕಾಗಿ ಪಕ್ಷೆತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಆರ್. ಶಂಕರ್ ಅಭಿಮಾನಿಗಳು ಮತದಾರರಿಗೆ ಸೀರೆ ಹಂಚುತ್ತಿದ್ದ ಸಮಯದಲ್ಲಿ ಸಿಕ್ಕಿಬಿದ್ದ ಘಟನೆ ತಾಲೂಕಿನ ಕವಲೇತ್ತು ಗ್ರಾಮದಲ್ಲಿ ಶನಿವಾರ ನಡೆದಿದೆ.
ಕಳೆದ ಒಂದು ವರ್ಷದಿಂದೀಚೇಗೆ ಬೆಂಗಳೂರಿನಿಂದ ನಗರಕ್ಕಾಗಮಿಸಿರುವ ಹಾಗೂ ಮೇ. 5ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಣಿಬೆನ್ನೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೀಳಿಯಲು ಮುಂದಾಗಿರುವ ಬಿಬಿಎಂಪಿ ಮಾಜಿ ಉಪ ಮೇಯರ ಆರ್. ಶಂಕರ್ ಅಭಿಮಾನಿಗಳು ಈ ಹಿಂದೆ ನಡೆದ ನಗರಸಭೆ ಚುನಾವಣೆಯಲ್ಲಿ ಸೀರೆ ಹಂಚುವ ಸಮಯದಲ್ಲಿ ಸಿಕ್ಕಿದ್ದ ಸಮಯದಲ್ಲಿ ಮುಂದೆಂದೂ ಈ ರೀತಿ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಟ್ಟಿದ್ದರು.
ಪ್ರಸಕ್ತ ಮತ್ತೆ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಶನಿವಾರ ತಾಲೂಕಿನ ಕೂಡಿಯಾಲ ಗ್ರಾಮದಲ್ಲಿ ಮತದಾರರಿಗೆ ಸೀರೆಗಳನ್ನು ಹಂಚಲು ಮುಂದಾಗಿದ್ದರು.
ಈ ಕುರಿತು ಮನೆಯಲ್ಲಿ ಸೀರೆಗಳನ್ನು ಸಂಗ್ರಹಿಸಿಟ್ಟಿರುವ ಕುರಿತು ಖಚಿತ ಮಾಹಿತಿ ಪಡೆದ ತಹಸೀಲ್ದಾರ್ ಕೆ. ಎಚ್. ಶಿವಕುಮಾರ ಮತ್ತು ಚುನಾವಣಾಧಿಕಾರಿ ಬಸನಗೌಡ ದಾಳಿ ನಡೆಸಿ ಮತದಾರರಿಗೆ ಹಂಚುವುದಕ್ಕಾಗಿ ಕವಲೆತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷ ರೇವಣೆಪ್ಪ ಸಣ್ಣದುರುಗಪ್ಪ ಪೂಜಾರ ಇವರ ಮನೆಯಲ್ಲಿ ಸಂಗ್ರಹಿಸಿದ್ದ 1,906 ಸೀರೆಗಳನ್ನು ವಶಪಡಿಸಿಕೊಂಡಿದ್ದಾರೆ.
ಪಕ್ಷೇತರ ಅಭ್ಯರ್ಥಿ ಆರ್. ಶಂಕರ್ ಹಾಗೂ ರೇವಣೆಪ್ಪ ಕೂಡೇರ ಎಂಬುವವರ ಮೇಲೆ ಕುಮಾರಪಟ್ಟಣಂ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ತಾಲೂಕು ಚುನಾವಣಾಧಿಕಾರಿ ಬಸನಗೌಡ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement