ಅಭ್ಯರ್ಥಿ ಗೆಲವಿಗೆ ಶ್ರಮ
ರಾಣಿಬೆನ್ನೂರು: ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡುವ ಅಭ್ಯರ್ಥಿ ಗೆಲುವಿಗೆ ತಾವು ಶ್ರಮಿಸುವುದಾಗಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ಉದ್ಯಮಿ ಅರುಕುಮಾರ ಎಂ.ಎಂ.ಪಿ ಕುಮಾರ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೇ 5ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ರಾಣಿಬೆನ್ನೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಒತ್ತಾಯಿಸಿ ರಾಜ್ಯ ಹೈಕಮಾಂಡ್ಗೆ ತಾಲೂಕಿನಿಂದ 8 ಜನ ಅರ್ಜಿ ಸಲ್ಲಿಸಿದ್ದು, ಹೈಕಮಾಂಡ್ ನನಗೆ ಟಿಕೆಟ್ ನೀಡಿದಲ್ಲಿ ಸ್ಪರ್ಧಿಸುತ್ತೆನೆ. ನನ್ನನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿದಲ್ಲಿ ಅವರ ಗೆಲವಿಗಾಗಿ ನಾನು ಶ್ರಮಿಸುತ್ತೇನೆ. ರಾಜ್ಯದ ಜನತೆ ಎಂದು ಕಂಡರಿಯದ ರೀತಿಯಲ್ಲಿ ರಾಜ್ಯದ ಅಭಿವೃದ್ಧಿಗಾಗಿ 4 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಸಾಧಿಸಿರುವ ಸಾಧನೆಗಳೆ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗುತ್ತದೆ.
ಬಿಜೆಪಿ ಪಕ್ಷ ತಮಗೆ ನೀಡಿದ್ದ ಅಧಿಕಾರದಲ್ಲಿದ್ದುಕೊಂಡು ಪಕ್ಷದ ಹೆಸರಿಗೆ ಮಸಿ ಬಳಿಯುವ ಕಾರ್ಯಗಳನ್ನು ನಡೆಸಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುವಂತೆ ನಡೆದುಕೊಂಡಿದ್ದವರೆಲ್ಲಾ ಪಕ್ಷವನ್ನು ಬಿಟ್ಟು ಬೇರೋಂದು ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಕಾರಣ ಸಾರ್ವಜನಿಕರು ಬಿಜೆಪಿ ಪಕ್ಷದ ವಿರುದ್ಧ ಟೀಕೆ ಮಾಡುವವರ ಮಾತುಗಳಿಗೆ ಬೆಲೆ ನೀಡದೆ ಬಿಜೆಪಿ ಅಭ್ಯರ್ಥಿ ಗೆಲವಿಗೆ ಮುಂದಾಗಬೇಕು. ಬಡವರ ಮನೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ಆ ಮಗುವಿಗೆ ರು. 25 ಸಾವಿರ ಹಣ ನೀಡಿರುವ ಹಾಗೂ ಬಡವರ ಮುಖದಲ್ಲಿ ನಗುವಿನ ಛಾಯೇ ಮೂಡಲು ಬಿಜೆಪಿ ಸರ್ಕಾರವೇ ಕಾರಣ, ರಾಜ್ಯದ ಸಣ್ಣ- ಅತೀ ಸಣ್ಣ ರೈತರ ಏಳ್ಗೆಗಾಗಿ, ಬಡ ಮಕ್ಕಳ ಶೈಕ್ಷಣಿಕಾಭಿವೃದ್ಧಿಗಾಗಿ ಉಚಿತ ಸೈಕಲ್ಗಳನ್ನು ನೀಡುವುದಕ್ಕಾಗಿ ಮುಂದಾಗಿರುವ ಸರ್ಕಾರ ಯಾವುದೆಂದು ಯೋಚಿಸಿ, ಬಿಜೆಪಿಗೆ ಮತ ನೀಡಲು ಮತದಾರರು ಮುಂದಾಗಬೇಕೆಂದು ಎಂಎಂಪಿ ಕುಮಾರ ಮತದಾರರನ್ನು ವಿನಂತಿಸಿದರು. ಯುವ ಬಿಜೆಪಿ ಮುಖಂಡರಾದ ಕೃಷ್ಣ ಮೋರ್ತಿ ಬಣಕಾರ, ವೀರಣ್ಣ ಯಲ್ಲಾಪುರ, ತಿರುಕಶಿಂಗ್ ಪಾಟೀಲ, ಕಿರಣ ಅಂಗಡಿ, ನಾಗರಾಜ ಪತ್ತೆಪುರ ಇದ್ದರು.