ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹೆಸರು ಮಾಯ: 'ಕೈ'ಕಮಾಂಡ್‌ಗೆ ದೂರು

Vishwanath S
Updated On : 9 Apr 2013, 10:54 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಏ. 8
ಸ್ಕ್ರೀನಿಂಗ್ ಸಮಿತಿಯಲ್ಲಿ ಅಂತಿಮಗೊಂಡಿದ್ದ ನನ್ನ ಹೆಸರು ಮಾಯವಾಗಿದೆ. ಇದು ಕ್ಷೇತ್ರದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ಸಲ್ಲಿಸುವುದಾಗಿ ಬ್ಯಾಡಗಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಸ್.ಆರ್. ಪಾಟೀಲ ಹೇಳಿದರು. ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆಪಿಸಿಸಿಯಿಂದ ವರಿಷ್ಠರಿಗೆ ತಮ್ಮ ಹಾಗೂ ಬಸವರಾಜ ಶಿವಣ್ಣವರ ಹೆಸರು ಶಿಫಾರಸಾಗಿತ್ತು. ಸ್ಕ್ರೀನಿಂಗ್ ಸಮಿತಿಯಲ್ಲಿ ನನ್ನ ಹೆಸರು ಅಂತಿಮಗೊಂಡಿದ್ದು ಮಾಧ್ಯಮಗಳಲ್ಲಿಯೂ ಪ್ರಕಟವಾಗಿತ್ತು. ಕೊನೆಗಳಿಗೆಯ ರಾಜಕೀಯ ಬೆಳವಣಿಗೆಯಿಂದ ಟಿಕೆಟ್ ವಂಚಿತನಾಗಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.
ಎಐಸಿಸಿ ಬಿಡುಗಡೆ ಮಾಡಿದ ಕೆಲ ನಿಯಮಗಳಿಂದ ಕ್ಷೇತ್ರದಲ್ಲಿ ಸ್ಪರ್ಧಿಸುವ ಆಸೆ ಮೂಡಿತ್ತು. ಆದರೆ, ಅಂತಿಮವಾಗಿ ನಿಯಮ ಪಾಲನೆ ಮಾಡುವ ಕುರಿತು ಕೆಪಿಸಿಸಿ ಮೌನ ವಹಿಸಿದ್ದರಿಂದ ರಾಜ್ಯಾದ್ಯಂತ ಆಕಾಂಕ್ಷಿಗಳು ಹೆಚ್ಚಲು ಕಾರಣವಾಯಿತು ಎಂದರು.
ಅವಕಾಶ ಸಿಗುವ ವಿಶ್ವಾಸ: ಕಾಂಗ್ರೆಸ್ ಹೈಕಮಾಂಡ್ ಮೇಲೆ ವಿಶ್ವಾಸವಿದೆ. ವರಿಷ್ಠರು ಹಾಗೂ ಆಯ್ಕೆ ಸಮಿತಿ ಸದಸ್ಯರು ನನಗೆ ಅವಕಾಶ ಕಲ್ಪಿಸುವ ಮಾತನಾಡಿದ್ದಾರೆ. ರಾಜಕೀಯದಲ್ಲಿ ಎಲ್ಲವೂ ನಡೆಯುತ್ತದೆ. ಹೀಗಾಗಿ ಯಾವುದೇ ನಿರ್ಧಾರಕ್ಕೆ ಬರಲು ಇದು ಸೂಕ್ತ ಕಾಲವಲ್ಲ. ಕಾದು ನೋಡುವೆ ಎಂದರು. ಟಿಕೆಟ್ ನೀಡುವಂತೆ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. 35 ವರ್ಷಗಳಿಂದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ನಿರ್ವಹಿಸಿದ್ದೇನೆ. ಈ ವರೆಗೂ ತಾವು ಬೇವು ತಿಂದು ಹಿಂಬಾಲಕರಿಗೆ ಬೆಲ್ಲದ ಸವಿಯನ್ನು ನೀಡಿದ್ದೇನೆ ಎಂದು ಮಾರ್ಮಿಕವಾಗಿ ನುಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement