ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಊಟ: ಬಿಎಸ್ಸಾರ್ ಮುಖಂಡನಮೇಲೆ ಕೇಸು

Rashmi Kasaragodu
Updated On : 10 Apr 2013, 10:16 am

ಬ್ಯಾಡಗಿ: ಪಟ್ಟಣದ ವಿವೇಕಾನಂದ ನಗರದಲ್ಲಿ ಮತದಾರರನ್ನು ಓಲೈಸಲು ಪಕ್ಷದ ಅಭ್ಯರ್ಥಿಯೊಬ್ಬರು ಊಟದ ವ್ಯವಸ್ಥೆ ಕಲ್ಪಿಸಿದ್ದ ಸ್ಥಳದ ಮೇಲೆ ದಾರಿ ಮಾಡಿದ ಪಿಎಸ್‌ಐ ಎನ್.ವಿ. ಬೇಲೂರ ನೇತೃತ್ವದ ತಂಡ ಊಟಕ್ಕೆ ಬಳಸಲಾದ ವಸ್ತುಗಳನ್ನು ವಶಪಡಿಸಿಕೊಂಡು, ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಿದೆ.
ಮಂಗಳವಾರ ಮಧ್ಯಾಹ್ನ ಊಟದ ವ್ಯವಸ್ಥೆ ಕಲ್ಪಿಸಿದ್ದ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿ ದಾದಾಪೀರ ಭೂಷಿ ಅವರ ಮನೆಯಲ್ಲಿದ್ದ ವಸ್ತುಗಳನ್ನು ತಂಡ ವಶಪಡಿಸಿಕೊಂಡಿದೆ. ಟಾಟಾ ಏಸ್ ವಾಹನ ಹಾಗೂ ಅಡುಗೆ ಪರಿಕರಗಳು ವಶವಾಗಿವೆ. ಸಿಬ್ಬಂದಿ ಎಎಸ್‌ಐ ಕೆ.ಎಫ್. ರಮಜಾನಿ, ಹವಾಲ್ದಾರ ಬಸವರಾಜ ಅಂಜುಟಗಿ, ಪಿಸಿಗಳಾದ ಕೆ.ಎಸ್. ಗುಂದೇರ, ಜೆ.ಸಿ. ಬ್ಯಾಡಗಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement