ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕುಮದ್ವತಿಗೆ ನೀರು ಹರಿಸಿ

Rashmi Kasaragodu
Updated On : 10 Apr 2013, 10:15 am

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಏ. 9
ತಾಲೂಕಿನ 32 ಹಳ್ಳಿಗಳ ಜನ ಹಾಗೂ ಜಾನುವಾರುಗಳಿಗೆ ಜೀವನಾಡಿ ಕ್ಯಾತಿಗೆ ಪಾತ್ರವಾಗಿರುವ ಪ್ರಸಕ್ತ ಬತ್ತಿ ಬರಿದಾಗಿರುವ ಕುಮದ್ವತಿ ನದಿಗೆ ತುಂಗಾ ಮೇಲ್ದಂಡೆ ಕಾಲುವೆ ಮೂಲಕ ನೀರು ಹರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಕಾರ್ಯಕರ್ತರು, ರಾಜ್ಯ ಸಂಘಟನಾ ಕಾರ್ಯದರ್ಶಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಾಲೂಕು ನೀರಾವರಿ ಇಲಾಖೆ ಅಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ರವಿಂದ್ರಗೌಡ ಎಫ್. ಪಾಟೀಲ ಮಾತನಾಡಿ, ಕಳೆದ 2 ತಿಂಗಳಿಂದ ತಾಲೂಕಿನ 32 ಹಳ್ಳಿಗಳ ಜೀವನಾಡಿಯಾಗಿರುವ ಮತ್ತು ತಾಲೂಕಿನ ಮಧ್ಯೆ ಹರಿದಿರುವ ಕುಮದ್ವತಿ ನದಿ ಸಂಪೂರ್ಣ ಬರಿದಾಗಿರುವ ಕಾರಣ ನದಿಯ ಅಕ್ಕಪಕ್ಕದ ಹಳ್ಳಿಗಳ ಜನ ಹಾಗೂ ಜಾನುವಾರು ಕುಡಿಯುವ ನೀರಿಗಾಗಿ ತೊಂದರೆ ಅನುಭವಿಸುವಂತಾಗಿದೆ.
ತಾಲೂಕಿನ ಮಧ್ಯ ಭಾಗದಲ್ಲಿ ಉತ್ತರದಿಂದ ದಕ್ಷಿಣ ಮಾರ್ಗವಾಗಿ ನಿರ್ಮಿಸಿರುವ ತುಂಗಾ ಮೇಲ್ದಂಡೆ ಕಾಲುವೆಯ 161 ಕಿ.ಮಿವರೆಗೆ ಗಾಜುನೂರಿನಲ್ಲಿರುವ ತುಂಗಾ ಮೇಲ್ದಂಡೆಯ ಮುಖ್ಯ ಡ್ಯಾಂನಿಂದ 100 ಕ್ಯುಸೆಕ್ ನೀರನ್ನು ಹರಿಸಿ ಆ ನೀರನ್ನು ಕುಮದ್ವತಿ ನದಿಗೆ ಸೇರಿಸಿದಲ್ಲಿ ನದಿ ಪಾತ್ರದಲ್ಲಿ ಬರುವ 32 ಗ್ರಾಮಗಳ ಜನ ಹಾಗೂ ಜಾನುವಾರು ತಿಂಗಳಾಂತ್ಯದವರೆ ನಿಶ್ಚಿಂತೆಯಿಂದಿರಲು ಸಾಧ್ಯವಾಗುತ್ತದೆ. ಕಾರಣ ರಾಜ್ಯಪಾಲರು ಶೀಘ್ರ 1000 ಕ್ಯುಸೆಕ್ ನೀರನ್ನು ತುಂಗಾ ಮೇಲ್ದಂಡೆ ಕಾಲುವೆ ಮುಖಾಂತರ ನದಿಗೆ ನೀರು ಹರಿಸಲು ಮುಂದಾಗಬೇಕೆಂದು ಪಾಟೀಲ ಆಗ್ರಹಿಸಿದರು.
ಪ್ರತಿಭಟನಾಕಾರರಿಂದ ಮನವಿ ಸ್ವಿಕರಿಸಿದ ತುಂಗಾ ಮೇಲ್ದಂಡೆ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಟಿಕಾರೆ ಮಾತನಾಡಿ, ಮಹತ್ವದ ಕಾರ್ಯಕೈಗೊಳ್ಳುವುದಕ್ಕಾಗಿ ರಾಜ್ಯಪಾಲರಿಗೆ ಮನವಿ ಪತ್ರ ಕಳುಹಿಸಿಕೊಡುವುದಾಗಿ ತಿಳಿಸಿದ್ದರಿಂದ ಪ್ರತಿಭಟನಾಕಾರರು ಪ್ರತಿಭಟನೆಯಿಂದ ಹಿಂದಕ್ಕೆ ಸರಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡ ಜಯಪ್ಪ ಮಡಿವಾಳರ, ಎಸ್.ಎಂ. ಬ್ಯಾಡಗೌಡ್ರ, ಸುರೇಶಪ್ಪ ಗರಡಿಮನಿ, ಚಂದ್ರಪ್ಪ ಬೇಡರ, ಹರಿಹರಗೌಡ ಪಾಟೀಲ, ಅಶೋಕರೆಡ್ಡಿ ಬಾವಿಕಟ್ಟಿ, ಶ್ರೀನಿವಾಸ ರಾಜನಹಳ್ಳಿ, ಸಿದ್ದಪ್ಪ ಜೀಗಳಿ, ಕೇಶವ ಹರಿಹರ ಇದ್ದರು.


ಎರಡು ತಿಂಗಳಿಂದ ತಾಲೂಕಿನ 32 ಹಳ್ಳಿಗಳ ಜೀವನಾಡಿಯಾಗಿರುವ ಮತ್ತು ತಾಲೂಕಿನ ಮಧ್ಯೆ ಹರಿದಿರುವ ಕುಮದ್ವತಿ ನದಿ ಸಂಪೂರ್ಣ ಬರಿದಾಗಿರುವ ಕಾರಣ ನದಿಯ ಅಕ್ಕಪಕ್ಕದ ಹಳ್ಳಿಗಳ ಜನ ಹಾಗೂ ಜಾನುವಾರು ಕುಡಿಯುವ ನೀರಿಗಾಗಿ ತೊಂದರೆ ಅನುಭವಿಸುವಂತಾಗಿದೆ.
ರವಿಂದ್ರಗೌಡ ಪಾಟೀಲ,
ರೈತ ಸಂಘ, ಹಸಿರು ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement