ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನಿಗದಿತ ಸಮಯಕ್ಕೆ ಪಡಿತರ ವಿತರಿಸಿ: ಕರವೇ ಒತ್ತಾಯ

Rashmi Kasaragodu
Updated On : 10 Apr 2013, 10:15 am

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಏ.9
ತಾಲೂಕಿನ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿನ ಪಡಿತರ(ರೇಷನ್) ಕಾರ್ಡುದಾರರಿಗೆ ಸಮಯಕ್ಕೆ ಸರಿಯಾಗಿ ಗುಣಮಟ್ಟದ ಆಹಾರ ಧಾನ್ಯ ವಿತರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಉಪ ತಹಸೀಲ್ದಾರ್ ರಿತ್ತಿ ಮುಖಾಂತರ ಜಿಲ್ಲಾಧಿಕಾರಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.  
ಪ್ರತಿಭಟನೆ ನೇತೃತ್ವ ವಹಿಸಿದ್ದ ಕರವೇ ತಾಲೂಕು ಅಧ್ಯಕ್ಷ ಜಿ.ಎಸ್. ಕೊಟ್ರೇಶ ಮಾತನಾಡಿ, ಅಧಿಕೃತವಾಗಿ ರೇಶನ್ ಕಾರ್ಡುಗಳನ್ನು ಹೊಂದಿರುವವರಿಗೆ ರೇಶನ್ ವಿತರಿಸುವ ಜವಾಬ್ದಾರಿ ಹಾಗೂ ರೇಶನ್ ಅಂಗಡಿಯ ಲೈಸನ್ ಹೊಂದಿರುವ ರೇಶನ್ ಅಂಗಡಿಯ ಮಾಲೀಕರು, ವಿತರಣೆಯಲ್ಲಿ ಭಾರಿ ಅವ್ಯವಹಾರ ನಡೆಸುತ್ತಿದ್ದಾರೆ. ಕಾರ್ಡುದಾರರ ಹೆಸರಿನಲ್ಲಿ ಪಡೆದ ಸೀಮೆಎಣ್ಣಿಯನ್ನು ಕಾರ್ಡುದಾರರಿಗೆ ವಿತರಿಸುವ ಬದಲು ರಾತ್ರೊರಾತ್ರಿ ಕಾಳಸಂತೆಯಲ್ಲಿ ಮಾರಾಟ ಮಾಡಿ, ಕಾರ್ಡುದಾರರಿಗೆ ಕಡಿಮೆ ಪ್ರಮಾಣದಲ್ಲಿ ಸೀಮೆಎಣ್ಣೆ ಹಂಚುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರವೇ ತಾಲೂಕು ಸಂಘಟಕ ಪರಶುರಾಮ ಕಾಳೇರ, ಕರಿಯಪ್ಪ ದವರಗುಡ್ಡ, ಕರಿಯಪ್ಪ ಹಳ್ಳಳ್ಳಿ, ಯಶವಂತ ಗುತ್ತಲ, ಆನಂದ ಕಾಳೇರ ಮಾತನಾಡಿದರು. ಪ್ರತಿಭಟನಾಕಾರರಿಂದ ಮನವಿ ಸ್ವಿಕರಿಸಿದ ಉಪ ತಹಸೀಲ್ದಾರ್ ರಿತ್ತಿ ಮಾತನಾಡಿ, ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರಿಂದ,ಪ್ರತಿಭಟನಾಕಾರರು ಪ್ರತಿಭಟನೆಯಿಂದ ಹಿಂದಕ್ಕೆ ಸರಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement