ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಭಾಷೆ ಉನ್ನತಿಗೆ ಆಕರಗಳು ಅಗತ್ಯ

Rashmi Kasaragodu
Updated On : 10 Apr 2013, 10:15 am

ಕನ್ನಡಪ್ರಭ ವಾರ್ತೆ, ಶಿಗ್ಗಾವಿ, ಏ.9
ಒಂದು ಭಾಷೆ ಉನ್ನತ ಮಟ್ಟಕ್ಕೆ ತಲುಪಲು ಆಕರಗಳು ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಕನ್ನಡ ಭಾಷೆ ಚರಿತ್ರೆಯನ್ನು ಉನ್ನತ ಮಟ್ಟಕ್ಕೆ ಬೆಳೆಸಬೇಕಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಉಪ ಕುವಪತಿ ಡಾ೤ ಹಿ.ಚಿ. ಬೋರಲಿಂಗಯ್ಯ ಅಭಿಪ್ರಾಯಪಟ್ಟರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಧ್ಯಯನ ವಿಭಾಗ ಮತ್ತು ಕರ್ನಾಟಕ ಜಾನಪದ ವಿವಿ ಆಶ್ರಯದಲ್ಲಿ ಮಂಗಳವಾರ ನಡೆದ ಜನಪದರು ಮತ್ತು ಭಾಷೆ ವಿಷಯ ಕುರಿತು ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಪಶ್ಚಿಮದ ಮೌಖಿಕ ಹೊರಟ ರೀತಿಯಲ್ಲಿ ಬೋರಲಿಂಗಯ್ಯ ತಿಳಿದುಕೊಳ್ಳಲು ನೆಲೆಗಟ್ಟಲ್ಲಿ ಪ್ರತಿಪಾದಿಸಿದರು.
ಭಾಷೆಯನ್ನು ನಿರಂತರರಾಗಿಸಬೇಕು ಎಂದು ಸಂಶೋಧಕರಿಗೆ ಕಿವಿಮಾತು ಹೇಳಿದರು.
ದೇಸಿ ಸಂಸ್ಕೃತಿ ಅರಿಯಿರಿ: ಕರ್ನಾಟಕ ಜಾನಪದ ವಿವಿ ಕುಲಪತಿ ಪ್ರೊ೤ ಅಂಬಳಿಕೆ ಹಿರಿಯಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರಂಭದಲ್ಲಿ ಜಾನಪದ ಅಧ್ಯಯನ ಭಾಷಿಕ ನೆಲೆಯಿಂದಲೇ ಆಗಿದೆ. ದೇಸಿ ಪದಗಳು ಹಾಗೂ ಪಾರಿಭಾಷಿಕ ಪದಗಳನ್ನು ಬಳಸಿ ದೇಸಿ ಸಂಸ್ಕೃತಿ ಅರಿಯುವಲ್ಲಿ ಜರೂರತ್ತು ನಮ್ಮ ಮುಂದಿದೆ ಎಂದರು.
ನೂತನ ಸಂಶೋಧನೆ ಅಗತ್ಯ: ಕನ್ನಡ ವಿವಿಯ ಭಾಷಾಧ್ಯಯನ ವಿಭಾಗದ ಮುಖ್ಯಸ್ಥ ಡಾ೤ ಅಶೋಕ ಕನ್ನಡ ವಿವಿ ಹಾಗೂ ಕರ್ನಾಟಕ ಜಾನಪದ ವಿಶ್ವವಿದ್ಯಾಲಯಗಳು ಒಂದೇ ಮರೆಮಾಚಲಾಗಿರುವ ತಿಳಿವಳಿಕೆಯನ್ನು ಎರಡೂ ಜನಪದರ ಮೌಖಿಕ ಭಾಷೆಯನ್ನು ಆಕರವಾಗಿ ರೀತಿಯಲ್ಲಿ ವಿಶ್ವವಿದ್ಯಾಲಯದ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಪರಂಪರೆಯ ಈವರೆಗಿನ ಪ್ರಗತಿ, ಮಹತ್ವದ ವಿಶ್ವವಿದ್ಯಾಲಯಗಳು ನಿರತವಾಗಿದ್ದು, ಹೊಸ ಕಾರ್ಯದಲ್ಲಿ ಬಗೆಯ ಜ್ಞಾನ ಶೋಧದಲ್ಲಿ ತೊಡಗಿಕೊಂಡಿವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ೤ ಸಿ.ಎ. ಸೋಮಶೇಖರಪ್ಪ, ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯದ ಡೀನ್ ಡಾ೤ ಡಿ. ಪಾಂಡುರಂಗಬಾಬು ಉಪಸ್ಥಿತರಿದ್ದರು. ಪ್ರೊ೤ ಹಿ.ಚಿ. ಬೋರಲಿಂಗಯ್ಯ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ೤ ಸ.ಚಿ. ರಮೇಶ್ ಸ್ವಾಗತಿಸಿದರು. ಮೋಹನಕುಮಾರ್ ಪ್ರಾರ್ಥಿಸಿದರು. ಹಿರಿಯ ಸಂಶೋಧನಾಧಿಕಾರಿ ಡಾ೤ ಪ್ರೇಮಕುಮಾರ ವಂದಿಸಿದರು. ತಾತ್ಕಾಲಿಕ ಅತಿಥಿ ಪ್ರಾಧ್ಯಾಪಕರಾದ ಶ್ವೇತಾ ಎಂ.ಬಿ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement