ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಚುನಾವಣೆಗೆ ಸಕಲ ಸಿದ್ಧತೆ

Vishwanath S
Updated On : 11 Apr 2013, 12:47 pm

ಕನ್ನಡಪ್ರಭ ವಾರ್ತೆ, ಹಾವೇರಿ, ಏ. 10
ಚುನಾವಣೆಯಲ್ಲಿ ಅಕ್ರಮಗಳಿಗೆ ಆಸ್ಪದ ನೀಡದೇ ಶಾಂತಿಯುತ ಮತದಾನ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ತಿಳಿಸಿದರು.
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಬಯಸಿ 50,896 ಅರ್ಜಿಗಳು ಬಂದಿದ್ದವು. ಈ ಪೈಕಿ 38,298 ಹೆಸರುಗಳನ್ನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯವಲ್ಲಿ ಅವರು ತಿಳಿಸಿದರು.
ಇನ್ನ್ನುಳಿದ ಅರ್ಜಿಗಳನ್ನು ಇನ್ನೆರಡು ದಿನಗಳಲ್ಲಿ ಪರಿಶೀಲಿಸಿ ಹೆಸರು ಸೇರ್ಪಡೆ ಮಾಡಲಾಗುವುದು. ಹೊಸದಾಗಿ  
ಹೆಸರು ಸೇರ್ಪಡೆಯಾದ ಒಟ್ಟು ಮತದಾರರ ಪೈಕಿ 25 ಸಾವಿರ ಜನರಿಗೆ ವಾರದೊಳಗೆ ಎಪಿಕ್ ಕಾರ್ಡ್ ವಿತರಿಸಲಾಗುವುದು ಎಂದರು.
7ರಿಂದ ಸಂಜೆ 5ರ ವರೆಗೆ ಮತದಾನ: ಮತದಾನಕ್ಕೆ ಮೇ 5ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಅವಕಾಶ ನೀಡಲಾಗುವುದು. ಚುನಾವಣಾ ಕಾರ್ಯಕ್ಕೆ ಒಟ್ಟು 5,436 ಸಿಬ್ಬಂದಿ ಅವಶ್ಯಕವಿದ್ದು, ಶೇ. 20ರಷ್ಟು ಹೆಚ್ಚುವರಿಯಾಗಿ 6,524 ಸಿಬ್ಬಂದಿ ನಿಯೋಜಿಸಲಾಗುತ್ತಿದೆ.
ಆರು ಕ್ಷೇತ್ರಗಳಲ್ಲಿ ಮಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಹಾನಗಲ್ ಕ್ಷೇತ್ರದ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್, ನ್ಯೂ ಕಂಪೊಜಿಟ್ ಜ್ಯೂನಿಯರ್ ಕಾಲೇಜಿನಲ್ಲಿ ನಡೆಯಲಿದೆ.
ಶಿಗ್ಗಾವಿ ಕ್ಷೇತ್ರದ ಮಸ್ಟರಿಂಗ್- ಡಿಮಸ್ಟರಿಂಗ್ ಕಾರ್ಯವೂ ಜೆಎಂಜೆ ಹೈಸ್ಕೂಲ್‌ನಲ್ಲಿ, ಹಾವೇರಿ ಕ್ಷೇತ್ರದ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ಕಾರ್ಯವೂ ಜಿ.ಎಚ್. ಕಾಲೇಜಿನಲ್ಲಿ,  ಬ್ಯಾಡಗಿ ಕ್ಷೇತ್ರದ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ಕಾರ್ಯವೂ ಎಸ್‌ಜೆವಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಹಿರೇಕೆರೂರು ಕ್ಷೇತ್ರದ್ದು ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ. ರಾಣಿಬೆನ್ನೂರು ಕ್ಷೇತ್ರದ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ಕಾರ್ಯವೂ ರೋಟರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
ಫ್ಲಾಯಿಂಗ್ ಸ್ಕ್ವಾಡ್, ತನಿಖಾ ತಂಡ: ಚುನಾವಣಾ ಅಕ್ರಮಗಳನ್ನ್ನು ತಡೆಯುವುದಕ್ಕಾಗಿ ಹೋಬಳಿ ಮಟ್ಟದಲ್ಲಿ 19 ತನಿಖಾ ತಂಡ ಹಾಗೂ ಪ್ರತಿ ತಾಲೂಕಿಗೆ ಎರಡರಂತೆ ಫ್ಲಾಯಿಂಗ್ ಸ್ಕ್ವಾಡ್‌ಗಳನ್ನ್ನು ಮಾಡಲಾಗಿದೆ. ಇದಲ್ಲದೇ ಮೊಬೈಲ್ ತಂಡಗಳು ಸಂಚರಿಸುತ್ತಿವೆ ಎಂದರು.
ಈವರೆಗೆ ನೀತಿ ಸಂಹಿತೆ ಉಲ್ಲಂಘನೆಯ 6 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಸೀರೆ ಹಂಚುವ ಎರಡು  ಪ್ರಕರಣ ಹಾಗೂ ಒಂದು ಊಟದ ವ್ಯವಸ್ಥೆ ಮಾಡಿದ್ದಾಗಿವೆ.
ಅಬಕಾರಿ ದಾಳಿ: ಮಾ. 20ರಿಂದ ಈವರೆಗೆ ಜಿಲ್ಲೆಯಲ್ಲಿ 198 ಕಡೆಗಳಲ್ಲಿ ಅಬಕಾರಿ ದಾಳ್ನಿ ನಡೆಸಲಾಗಿದೆ. 26 ಪ್ರಕರಣಗಳನ್ನು ದಾಖಲಿಸಿಕೊಂಡು ರು. 84,550 ಮೌಲ್ಯದ ಮದ್ಯ್ನ ವಶಪಡಿಸಿಕೊಳ್ಳಲಾಗಿದೆ.
ಜಿಲ್ಲೆಯ ಐದು ಕಡೆಗಳಲ್ಲಿ ಅಬಕಾರಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಶಿಗ್ಗಾವಿ ತಾಲೂಕಿನ ತಡಸ (ಮೊ- 9449597098), ರಾಣಿಬೆನ್ನ್ನೂರು ಕುಮಾರಪಟ್ಟಣಂ (ಮೊ- 94495697100), ಹಾನಗಲ್ ತಾಲೂಕಿನ ಸಮ್ಮಸಗಿ(ಮೊ-9449597092), ಶಿಗ್ಗಾವಿ ವಡಗಟ್ಟಿ (ಮೊ-9449597098), ಸವಣೂರು ತಾಲೂಕಿನ ಯಲವಿಗಿ(ಮೊ-94495970092) ಯಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನಸಿಂಗ್ ರಾಥೋರ್, ಅಪರ ಜಿಲ್ಲಾಧಿಕಾರಿ ಜಿ. ಜಗದೀಶ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement