ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ರೋಮಾಂಚನಗೊಳಿಸಿದ ಗಾಡಾ ಓಡಿಸುವ ಸ್ಪರ್ಧೆ

Vishwanath S
Updated On : 11 Apr 2013, 12:48 pm

ಸವಣೂರು: ತಾಲೂಕಿನ ಮಂಟಗಣಿ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಉಡಚಮ್ಮದೇವಿ ಜಾತ್ರೆ ಹಾಗೂ ದೇವಸ್ಥಾನದ ಗೋಪುರ ಕಟ್ಟಡದ ಸಹಾಯಾರ್ಥವಾಗಿ ರಾಜ್ಯ ಮಟ್ಟದ ಗಾಡಾ ಓಡಿಸುವ ಸ್ಪರ್ಧಾ ಕಾರ್ಯಕ್ರಮವನ್ನು ಇತ್ತೀಚೆಗೆ ಜರುಗಿತು.
ಗ್ರಾಮಸ್ಥರು ಹಾಗೂ ಸ್ಥಳೀಯ ಸಂಘಟನೆಗಳ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಪ್ರಮುಖರಾದ ಶಿವಪ್ಪ ಬಿ. ಮಣ್ಣೂರ ಸ್ಪರ್ಧೆಗೆ ಚಾಲನೆ ನೀಡಿದರು.
ಎಪಿಎಮ್‌ಸಿ ಸದಸ್ಯ ಆರ್.ಎಸ್. ಪಾಟೀಲ, ರಾಮನಗೌಡ ಪಾಟೀಲ, ಶ್ರೀಧರ ದೊಡ್ಮನಿ, ಸತೀಶ ದೊಡ್ಮನಿ, ವೀರಪ್ಪ ಕಮ್ಮಾರ, ಉಮೇಶ ಲಂಗೋಟಿ, ಜಯಪಾಲ ಜಗಣ್ಣನವರ್ ಇತರ ಪ್ರಮುಖರು, ಹಿರಿಯರು ಉಪಸ್ಥಿತರಿದರು. ವಿಜೇತ ತಂಡ, ಉತ್ತಮ ಪ್ರದರ್ಶನ ನೀಡಿದ ಸ್ಪರ್ಧಾಳುಗಳನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement