ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಭ್ಯರ್ಥಿಗಳಿಗೆ ಸಮಗ್ರ ಮಾಹಿತಿ ಒದಗಿಸಿ

Lingaraj Badiger
Updated On : 13 Apr 2013, 11:40 am

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಏ.12
ಮೇ 5ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳಿಂದ ನಾಮಪತ್ರ ಸ್ವಿಕರಿಸುವುದಕ್ಕಾಗಿ ತಹಸೀಲ್ದಾರ್ ಕಚೇರಿಯಲ್ಲಿ ಸೂಕ್ತ ವ್ಯವಸ್ಧೆ ಕಲ್ಪಿಸಲಾಗಿದ್ದು, ಸ್ಪರ್ಧಿಸುವ ಅಭ್ಯರ್ಥಿಗಳು ಕರಪತ್ರಗಳನ್ನು ಮುದ್ರಿಸುವುದಕ್ಕಾಗಿ ಮುದ್ರಣಾಲಯಕ್ಕೆ ಬಂದ ಸಮಯದಲ್ಲಿ ಚುನಾವಣಾ ಆಯೋಗ ನೀಡಿರುವ ಸಮಗ್ರ ಮಾಹಿತಿ ಅವರಿಗೆ ತಿಳಿಪಡಿಸಲು ಮುದ್ರಕರು ಮುಂದಾಗಬೇಕೆಂದು ತಹಸೀಲ್ದಾರ್ ಕೆ.ಎಚ್ ಶಿವಕುಮಾರ  ತಿಳಿಸಿದರು.
ತಹಸೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಚುನಾವಣೆಯ ನಿಮಿತ್ತ ಮುದ್ರಕರು ಮುದ್ರಿಸುತ್ತಿರುವ ಕಿರುಹೂತ್ತಿಗೆ, ಕರಪತ್ರ, ಬ್ಯಾನರ್ ಸೇರಿದಂತೆ ಇನ್ನಿತರೆ ರೀತಿಯಲ್ಲಿ ಮುದ್ರಿಸುತ್ತಿರುವ ವಿವರದ ಕುರಿತು ಕಾಲಕಾಲಕ್ಕೆ ತಹಸೀಲ್ದಾರ ಕಚೇರಿಯಲ್ಲಿ ಆರಂಭಿಸಿರುವ ಚುನಾವಣಾ ವಿಭಾಗಕ್ಕೆ ಮಾಹಿತಿ ನೀಡಬೇಕು. ಮುದ್ರಿಸಿದ ಪ್ರತಿಗಳ ಸಂಖ್ಯೆ ಹಾಗೂ ಮುದ್ರಣಾಲಯದ ಹೆಸರನ್ನು ತಪ್ಪದೆ ಮುದ್ರಿಸಬೇಕು.
ಮೇ 5ರಂದು ನಡೆಯಲಿರುವ ಚುನಾವಣೆ ಸಮಯದಲ್ಲಿ ಹಾಗೂ ಅದಕ್ಕೂ ಪೂರ್ವದಲ್ಲಿ ನಡೆಯಲಿರುವ ಅಕ್ರಮಗಳನ್ನು ತಡೆಯುವುದಕ್ಕಾಗಿ ತಾಲೂಕಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಈಗಾಗಲೆ 1 ತುಕ್ಕಡಿ ಸಿಆರ್‌ಪಿಎಫ್ ಪೊಲೀಸ್ ಪಡೆ ನಗರಕ್ಕಾಗಮಿಸಿದೆ. ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಧೆ ಕಾಪಾಡುವುದಕ್ಕಾಗಿ ಕುಮಾರಪಟ್ಟಣ ಮತ್ತು ಹಲಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ಇನ್ನೆರಡು ಸಿಆರ್‌ಪಿಎಫ್ ತಂಡಗಳು ಆಗಮಿಸಲಿವೆ ಎಂದರು.
ಅಕ್ರಮ ಮದ್ಯ ಮತ್ತಿತರೆ ಸಾಮಗ್ರಿಗಳನ್ನು ಸಾಗಿಸುವವರ ಮೇಲೆ ನಿಗಾವಹಿಸುವುದಕ್ಕಾಗಿ ತಾಲೂಕಿನ ತುಮ್ಮಿನಕಟ್ಟಿ, ಮಾಕನೂರು, ಗುತ್ತಲ ಗ್ರಾಮದ ಸಮಿಪ ಚೆಕ್ ಪೊಸ್ಟ್‌ಗಳನ್ನು ತೆರೆಯಲಾಗಿದ್ದು, ಅಲ್ಲಿ ದಿನದ 24 ಗಂಟೆಗಳ ಕಾಲ ಬಿಡುವಿಲ್ಲದೆ ಸರತಿಯ ಮೇಲೆ ಕಾರ್ಯನಿರ್ವಹಿಸಲು ಶಸ್ತ್ರಸಜ್ಜಿತ ಗುಪ್ತದಳ ಸಿಬ್ಬಂದಿನೇಮಿಸಲಾಗಿದೆ ಎಂದು ತಹಸೀಲ್ದಾರ ಕೆ.ಎಚ್ ಶಿವಕುಮಾರ ಹಾಗೂ ತಾಲೂಕು ಚುನಾವಣಾಧಿಕಾರಿ ಬಸನಗೌಡ್ರ ಜೆಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement