ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಇಂದು ಕಬಡ್ಡಿ ಪಂದ್ಯಾವಳಿ

Lingaraj Badiger
Updated On : 13 Apr 2013, 11:30 am

ಹೊಳೆಆಲೂರ: ಸಮೀಪದ ಗಾಡಗೋಳಿ ಗ್ರಾಮದ ಯಚ್ಚರೇಶ್ವರ ಯುವಶಕ್ತಿ ಯುವಕರ ಬಳಗದ ವತಿಯಿಂದ ಜಾತ್ರಾ ಮಹೋತ್ಸವ ಅಂಗವಾಗಿ ಏ. 13ರ ಸಂಜೆ 4ಕ್ಕೆ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ಸಾನ್ನಿಧ್ಯವನ್ನು ಯಚ್ಚರೇಶ್ವರ ಶ್ರೀ, ಬೆನಹಾಳದ ಸದಾಶಿವ ಮಹಾಂತ ಶಿವಾಚಾರ್ಯರು, ಹೆಬ್ಬಳ್ಳಿಯ ಶ್ರೀ ಮತ್ತು ಚಾಂದ ಕೆರೂರ ಶ್ರೀಗಳು ವಹಿಸುವರು. ಗದಗ ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾದ ಅಧ್ಯಕ್ಷ ಬಸವಂತಪ್ಪ ತಳವಾರ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ನೀಲಪ್ಪಗೌಡ್ರ ಹನಮಂತಗೌಡ್ರ ವಹಿಸುವರು. ಅತಿಥಿಗಳಾಗಿ ಶಿವನಗೌಡ ಪಾಟೀಲ, ವರ್ತೂರ ರಮಾನಂದ, ಎಸ್.ವೈ. ಗಾಣಿಗೇರ, ಡಾ೤ ಎಸ್.ಬಿ. ಹಿರೇಗೌಡ್ರ, ಶಿವನಗೌಡ ಮುಲ್ಕಿಪಾಟೀಲ, ಎಸ್.ಎಲ್. ಹುಡೇದಮನಿ, ಸಿದ್ಧನಗೌಡ ಪೊಲೀಸಪಾಟೀಲ, ಶಿವನಗೌಡ ಚನ್ನಪ್ಪಗೌಡ್ರ, ಶಿವನಗೌಡ ಪಾಟೀಲ, ಮಹಾಂತಗೌಡ ಹನಮಂತಗೌಡ್ರ, ವೈ.ಡಿ. ಬಡಿಗೇರ, ಬಸವರಾಜ ಉಳ್ಳಾಗಡ್ಡಿ, ಮಹಾಂತೇಶ ಪೂಜಾರ, ಎ.ಬಿ. ಬಮ್ಮನಗೌಡ್ರ ಆಗಮಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.
ಬೇಸತ್ತು ನೇಣಿಗೆ ಶರಣು
ರೋಣ: ನಿತ್ಯ ಸಾರಾಯಿ ಕುಡಿಯುವುದು ಆರೋಗ್ಯಕ್ಕೆ ಹಾನಿಕರ. ಇದರಿಂದ ಕುಟುಂಬದಲ್ಲಿ ಯಾರಿಗೂ ನೆಮ್ಮದಿ ಇರುವುದಿಲ್ಲ, ಸಾರಾಯಿ ಕುಡಿಯುವುದನ್ನು ಬಿಡಬೇಕು ಎಂದಿದ್ದಕ್ಕೆ ಮನನೊಂದು ತಾಲೂಕಿನ ಸವಡಿ ಗ್ರಾಮದ ಮೈಲಾರಗೌಡ ಕನ್ನೂರ (38) ಗುರುವಾರ ಮಧ್ಯರಾತ್ರಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement