ಇಂದು ವಿದ್ಯುನ್ಮಾನ ಮತಯಂತ್ರ ವಿವರಣೆ
ಹಾವೇರಿ: ವಿದ್ಯುನ್ಮಾನ ಮತಯಂತ್ರಗಳ ರ್ಯಾಂಡ್ ಮೈಜೆಶನ್ ವಿಧಾನಸಭಾ ಕ್ಷೇತ್ರವಾರು ವಿತರಣೆ ಕಾರ್ಯಕ್ರಮ ಏ. 13ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಜರುಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆದ ವಿ. ಅನ್ಬುಕುಮಾರ ತಿಳಿಸಿದ್ದಾರೆ.
ಡಾ ಮಲ್ಲೇಶಪ್ಪ ಮತ ಯಾಚನೆ
ಹಾವೇರಿ: ಹಾವೇರಿ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಮಲ್ಲೇಶಪ್ಪ ಹರಿಜನ ಅವರು ವಿವಿಧ ಗ್ರಾಮಗಳಿಗೆ ತೆರಳಿ ಮತಯಾಚಿಸಿದರು. ಹಾವೇರಿ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಮಲ್ಲೇಶಪ್ಪ ಹರಿಜನ ಅವರು ಹಲವಾರು ಕಾರ್ಯಕರ್ತರೊಂದಿಗೆ ನಾಯಿಕೇರೂರಗೆ ಭೇಟಿ ನೀಡಿ ಪೂಜೆ ಸಲ್ಲಿಸುವುದರ ಮುಖಾಂತರ ಪಕ್ಷದ ನಿಲುವು ಹಾಗೂ ಅಭಿವೃದ್ಧಿಯ ಬಗ್ಗೆ ಜನರಲ್ಲಿ ಮನವರಿಕೆ ಮಾಡಿದರು. ಜೊತೆಗೆ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಅರಬಗೊಂಡ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಂದ್ರ ಕಟಕೋಳ, ಶಂಭಣ್ಣ ಗುಂಜಳ ಒಂದು ಮತ ನೀಡಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಲು ಅವಕಾಶ ನೀಡಬೇಕೆಂದು ನುಡಿದರು. ಗ್ರಾಮದ ಆಂಜನೇಯ ದೇವಸ್ಥಾನ, ವಿವಿಧ ಗ್ರಾಮಗಳಿಗೆ ತೆರಳಿ ಪಕ್ಷದ ಹಲವಾರು ಕಾರ್ಯಕರ್ಥರನ್ನು ಉದ್ದೇಶಿಸಿ ಪ್ರಾಧಿಕಾರದ ತತ್ವ, ಸಿದ್ದಾಂತಗಳ ಅಡಿಯಲ್ಲಿ ನಾವು ಕಾರ್ಯನಿರ್ವಹಿಸಿದರೆ ನಾವು ಜಯಶೀಲರಾಗಲು ಕಾರ್ಯಕರ್ತರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಡಾ ಮಲ್ಲೇಶಪ್ಪ ಹರಿಜನ ಅವರಿಗೆ ಮತ ನೀಡಿ ಜಯ ತಂದುಕೊಡಬೇಕೆಂದು ನುಡಿದರು. ಅಧ್ಯಕ್ಷ ನಾಗೇಂದ್ರ, ಇನ್ನಿತರ ನಾಯಕರು ಇದ್ದರು.
ಮತದಾನ ಜಾಗೃತಿ: ಸೈಕಲ್ ಜಾಥಾ
ಹಾವೇರಿ: ಮತದಾನ ಕುರಿತು ಜಾಗೃತಿ ಮೂಡಿಸಲು ಹುಬ್ಬಳ್ಳಿಯ ವೈಶಾಖ ಮೆಹೆಂದಳೆ ಹಾಗೂ ಧಾರವಾಡದ ವಿನಯಕುಮಾರ ಪಾಟೀಲ್ ಅವರು ಧಾರವಾಡದಿಂದ ಬೆಂಗಳೂರು ವರೆಗೆ ಸೈಕಲ್ ಜಾಥಾ ಕೈಗೊಂಡಿದ್ದಾರೆ. ಏ. 13ರ ಬೆಳಗ್ಗೆ 5.45ಕ್ಕೆ ಆರಂಭವಾಗಲಿರುವ ಈ ಜಾಥಾ, ಬೆಳಗ್ಗೆ 8ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ. ಸಂಜೆ 4ಕ್ಕೆ ಶಿಗ್ಗಾಂವಿ, ರಾತ್ರಿ 7ಕ್ಕೆ ಹಾವೇರಿಗೆ ಬಂದು ವಾಸ್ತವ್ಯ ಮಾಡುವರು. ಏ. 14ರ ಬೆಳಗ್ಗೆ 5.45ಕ್ಕೆ ಹಾವೇರಿಯಿಂದ ಹೊರಡುವ ಜಾಥಾ ಬೆಳಗ್ಗೆ 9.30ಕ್ಕೆ ರಾಣಿಬೆನ್ನೂರಿಗೆ ತೆರಳಲಿದೆ.