ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನಾಳೆ ಭಕ್ತಿಗೀತೆಗಳ ಕಾರ್ಯಕ್ರಮ

Lingaraj Badiger
Updated On : 13 Apr 2013, 11:41 am

ಹಾವೇರಿ:  ಬೆಂಗಳೂರು ದೂರದರ್ಶನ ಕೇಂದ್ರ, ಕದರಮಂಡಲಗಿ ಶ್ರೀ ಆಂಜನೇಯ (ಕಾಂತೇಶ) ಸ್ವಾಮಿ ದೇವಸ್ಥಾನ, ಧಾರವಾಡ ಅಕಾಶವಾಣಿ ಆಶ್ರಯದಲ್ಲಿ ಕನಕೋತ್ಸವ ನಿಮಿತ್ತ ಭಕ್ತಿಗೀತೆಗಳ 'ಮಧುರ ಮಧುರವೀ ಮಂಜುಳಗಾನ' ಕಾರ್ಯಕ್ರಮ ಏ. 14ರ ಸಂಜೆ 7ಕ್ಕೆ ಬ್ಯಾಡಗಿ ತಾಲೂಕು ಕದರಮಂಡಲಗಿಯ ಶ್ರೀ ಕಾಂತೇಶ್ವರ ಪ್ರೌಢಶಾಲೆ ಆವರಣದಲ್ಲಿ ಜರುಗಲಿದೆ. ರಾಜ್ಯ ಉಚ್ಚನ್ಯಾಯಾಲಯ ನ್ಯಾ. ಮೋಹನ ಶಾಂತನಗೌಡ ಉದ್ಘಾಟಿಸುವರು. ಕಾಗಿನೆಲೆ ಕನಕಗುರುಪೀಠದ ಜ. ನಿರಂಜನಾನಂದಪುರಿ ಶ್ರೀ, ಉಡುಪಿ ವಿಶ್ವೇಶತೀರ್ಥ ಶ್ರೀಪಾದಂಗಳು, ಹರಿಹರ ವೀರಶೈವ ಪಂಚಮಸಾಲಿ ಪೀಠದ ಸಿದ್ಧಲಿಂಗ ಶ್ರೀ, ಸಾಣೇಹಳ್ಳಿ ಶಾಖೆ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ, ಬಾಲೇಹೊಸೂರು ದಿಂಗಾಲೇಶ್ವರ ಶ್ರೀ, ಹುಕ್ಕೇರಿಮಠದ ಸದಾಶಿವ ಶ್ರೀ, ದಾವಣಗೆರೆ ವೇಮನ ಮಹಾಸಂಸ್ಥಾನಪೀಠದ ವೇಮನಾನಂದ ಶ್ರೀ, ರಟ್ಟಿಹಳ್ಳಿ ಶಿವಲಿಂಗ ಶ್ರೀ, ದಾವಣಗೆರೆ ವಾಲ್ಮೀಕಿ ಮಹಾಸಂಸ್ಥಾನಪೀಠದ ಪ್ರಸನ್ನಾನದಂಪುರಿ ಶ್ರೀ, ಮಲ್ಲಾಪುರ ಗುಡ್ಡದ ಶ್ರೀಕ್ಷೇತ್ರದ ಮೂಕಪ್ಪ ಶ್ರೀ, ಚಿತ್ರದುರ್ಗ ಭೋವಿಪೀಠದ ಸಿದ್ಧರಾಮೇಶ್ವರ ಶ್ರೀ ಸಾನ್ನಿಧ್ಯ ವಹಿಸುವರು. ಅತಿಥಿಗಳಾಗಿ ಹಾವೇರಿ ಜಿಲ್ಲಾ ಮತ್ತು ಸತ್ರ ನ್ಯಾ. ಎಚ್.ಪಿ. ಸಂದೇಶ, ವಿಧಾನಪರಿಷತ್ ಮಾಜಿ ಸದಸ್ಯ ವಿಜಯ ಸಂಕೇಶ್ವರ, ಜಿಲ್ಲಾಧಿಕಾರಿ ವಿ. ಅನ್ಬುಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚೇತನಸಿಂಗ್ ರಾಠೋಡ್, ಜಿಪಂ ಸಿಇಓ ಉಮೇಶ ಕುಸುಗಲ್ಲ, ಜಿಲ್ಲಾ ವಾರ್ತಾಧಿಕಾರಿ ಸಿ.ಪಿ. ಮಾಯಾಚಾರಿ ಆಗಮಿಸುತ್ತಾರೆಂದು ಬೆಂಗಳೂರು ದೂರದರ್ಶನ ಕೇಂದ್ರದ ಹೆಚ್ಚುವರಿ ಮಹಾನಿರ್ದೇಶಕ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement