ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮತದಾರರ ಆಶೀರ್ವಾದ: ರಾಜ್ಯ ಬಜೆಟ್ ಹೆಚ್ಚಳ

Lingaraj Badiger
Updated On : 13 Apr 2013, 11:30 am

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಏ. 12
ತೇರಿಗೆ ಸಂಗ್ರಹಿಸಿ-ಸಂಗ್ರಹಿಸಿರುವ ತೆರಿಗೆ ಹಣವನ್ನು ಖಜಾನೆಗೆ ತುಂಬದೆ ಹಾಗೂ ಸಾರ್ವಜನಿಕರ ಅಭಿವೃದ್ಧಿ ಕಾರ್ಯಗಳಿಗೆ ಬಳಸದೆ, ತೆರಿಗೆ ರೂಪದಲ್ಲಿ ಸಂಗ್ರಹಿಸಿದ್ದ ಹಣ ದುರುಪಯೋಗಪಡಿಸಿಕೊಂಡಿರುವ ಬಗ್ಗೆ ವಿರೋಧ ಪಕ್ಷದವನಾಗಿ ಸಮಗ್ರ ಮಾಹಿತಿ ಪಡೆದಿರುವ ನನ್ನ ಕೈಗೆ ರಾಜ್ಯಾಡಳಿತದ ಜವಾಬ್ದಾರಿಯನ್ನು ಜನತೆ ನೀಡಿದ್ದರ ಫಲವಾಗಿ ಕೇವಲ ರು.  34 ಸಾವಿರ ಕೋಟಿಯಿದ್ದ ಬಜೆಟ್‌ನ್ನು ರು.  1 ಲಕ್ಷ ಕೋಟಿಗೆರಿಸಲು ಮತದಾರರ ಆರ್ಶೀವಾದವೇ ಕಾರಣವಾಗಿತ್ತೆಂದು ಮಾಜಿ ಸಿಎಂ, ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದ ರೈಲ್ವೆ ಸ್ಟೆಷನ್ ರಸ್ತೆಯಲ್ಲಿರುವ ತಾಲೂಕು ಕೆಜೆಪಿ ಕಾರ್ಯಾಲಯದ ಬಳಿ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶ ಹಾಗೂ ರಾಣಿಬೆನ್ನೂರು ಕೆಜೆಪಿ ಅಭ್ಯರ್ಥಿ ಜಿ. ಶಿವಣ್ಣ ಪರ ಮತಯಾಚಿಸಿ ಬಳಿಕ ಬಳಿಕ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಸುಮಾರು 60 ವರ್ಷಗಳ ಕಾಲ ಸರ್ಕಾರದ ಹೆಸರಿನಲ್ಲಿ ತೆರಿಗೆ ಸಂಗ್ರಹಿಸಿರುವ ರಾಜ್ಯವನ್ನಾಳಿದ ಸರ್ಕಾರಗಳು, ರಾಜ್ಯ ಸಮಸ್ತ ಜನತೆಯ ಸರ್ವತೋಮುಖ ಅಭಿವೃದ್ಧಿಗಾಗಿ ತೆರಿಗೆ ರೂಪದಲ್ಲಿ ಸಂಗ್ರಹಿಸಿದ್ದ ಹಣವನ್ನು ಸರ್ಮಪಕವಾಗಿ ಬಳಸದಿರುವ ಕುರಿತು ವಿರೋಧ ಪಕ್ಷದಲ್ಲಿದ್ದ ಸಮಯದಲ್ಲಿ ಸೋರಿಕೆಯಾಗುತ್ತಿದ್ದ ತೆರಿಗೆ ಹಣದ ಬಗ್ಗೆ ನಾನು ಸಮಗ್ರ ಅಧ್ಯಯನ ನಡೆಸಿದ್ದೆ. ಕಳೆದ ನಾಲ್ಕುವರೆ ವರ್ಷದ ಹಿಂದೆ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದ್ದ ಪಕ್ಷಕ್ಕೆ ಜನತೆ ಮತ ನೀಡಿ ನನ್ನ ಬೆಂಬಲಿಗರನ್ನು ಆಯ್ಕೆ ಮಾಡಿ ರಾಜ್ಯಾಡಳಿತದ ಜವ್ಹಾಬ್ದಾರಿ ನಿರ್ವಹಿಸಲು ಶ್ರೀರಕ್ಷೆಯಾಗಿದ್ದಾರೆ ಎಂದರು.
ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ನಿರಂತರ ವಿದ್ಯುತ್ ಪೂರೈಸಲು ರು.  84 ಸಾವಿರ ಕೋಟಿಯನ್ನು ವ್ಯಯಿಸಿದ್ದೆವೆ. ರಾಜ್ಯದ ಹಿಂದುಳಿದ ಜಾತಿ ಜನಾಂಗದವರ ಅಭಿವೃದ್ಧಿಗಾಗಿ ರು.  850 ಕೋಟಿ, ಅಲ್ಪಸಂಖ್ಯಾತರ ಪವಿತ್ರ ಸ್ಥಳವಾದ ಹಜ್ ಯಾತ್ರಿಕರಿಗೆ ಸಹಾಯಧನ ಮತ್ತು ಹಜ್ ಭವನ ಕಟ್ಟಲು 10 ಎಕರೆ ಜಮಿನನ್ನು ನೀಡಿದ್ದೆವೆ. ಕಾರಣ ಮೇ 5ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಬೆಂಬಲಿಗರಿಗೆ ಮತನೀಡಿ, ಮ್‌ತೊಮ್ಮೆ ರಾಜ್ಯಾಡಳಿತದ ಜವ್ಹಾಬ್ದಾರಿಯನ್ನು ತಮ ಪಕ್ಷಕ್ಕೆ ನೀಡಿದಲ್ಲಿ ರಾಜ್ಯವನ್ನು ಸುಂದರವನ್ನಾಗಿಸಲು ಪಣತೊಟ್ಟಿರುವುದಾಗಿ ಬಿಎಸ್‌ವೈ ಹೇಳಿದರು.
ಬಿಎಸ್‌ವೈ ಸಹಕಾರದಿಂದ ಅಭಿವೃದ್ಧಿ
ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಜಿ. ಶಿವಣ್ಣ ಮಾತನಾಡಿ, ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಬಡವರ ಕಲ್ಯಾಣಕ್ಕಾಗಿ ಜಾರಿಗೊಳಿಸಿದ್ದ ವಿವಿಧ ಯೋಜನೆಗಳ ಫಲವಾಗಿ ತಾಲೂಕಿನ 25,250 ಜನ ವಿವಿಧ ಯೋಜನೆಯ ಲಾಭ ಪಡೆಯಲು ಕಾರಣವಾಯಿತು. ರೈತರ ಹೊಲಗಳಿಗೆ ನೀರುಣಿಸುವುದಕ್ಕಾಗಿ ರು.  256 ಕೋಟಿಯಲ್ಲಿ ತುಂಗಾ ಮೇಲ್ದಂಡೆ ಕಾಲುವೆ ನಿರ್ಮಾಣ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕೆಜೆಪಿ ರಾಜ್ಯ ಮುಖಂಡರಾದ ಬಾವಿ ಬೆಟ್ಟಪ್ಪ, ಜಿಲ್ಲಾ ಕೆಜೆಪಿ ಅಧ್ಯಕ್ಷ ಮೈಲಪ್ಪ ಗುಡಗೂರು, ತಾಲೂಕು ಅಧ್ಯಕ್ಷ ಶೇಖಪ್ಪ ಹೊಸಗೌಡ್ರ, ಎಸ್.ಎಸ್. ರಾಮಲಿಂಗಣ್ಣನವರ, ಮಾಜಿ ಸಚಿವ ಸಿ.ಎಂ. ಉದಾಸಿ ಹಾಗೂ ಕೆಜೆಪಿ ಮುಖಂಡರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement