ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮಾತಿನಿಂದ ಭಾಷೆ, ಸಂಸ್ಕೃತಿ ಬಿಂಬಿಸಿ

Lingaraj Badiger
Updated On : 13 Apr 2013, 11:40 am

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಏ. 12
ಮಾತು ಮೌಲ್ಯಯುತವಾಗಿರಬೇಕು. ಅದರಿಂದ ನಮ್ಮ ವ್ಯಕ್ತಿತ್ವ ಗುರುತಿಸಿಕೊಳ್ಳುವುದರ ಜತೆಗೆ ನಾವು ಬಳಸುವ ಭಾಷೆ, ನಡವಳಿಕೆ ನಮ್ಮ ಸಂಸ್ಕೃತಿ-ಸ್ವಭಾವ ಬಿಂಬಿಸುತ್ತವೆ ಎಂದು ಬ್ಯಾಡಗಿ ಬಿಎಂಇಎಸ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ೤ ಪ್ರೇಮಾನಂದ ಲಕ್ಕಣ್ಣನವರ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸ್ಥಳೀಯ ಶ್ರೀ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಶಿಲ್ಪಿಗೆ ಶಿಲೆಗಳು ಮೈಯೊಡ್ಡಿದಾಗ ಉಳಿಯ ಹೊಡೆತದಿಂದ ಆ ಶಿಲೆ ಕೊನೆಗೆ ಸುಂದರ ಮೂರ್ತಿಯಾಗುವಂತೆ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಾಗ ಗುರುಗಳೆಂಬ ಶಿಲ್ಪಿಗಳಿಂದ ಮುಂದಿನ ಬದುಕು ಸುಂದರವಾಗುತ್ತದೆ. ಇಂತಹ ಸುಂದರ ಬದುಕಿಗೆ ಪ್ರಾರ್ಥನೆಯಿಂದ ಪಡೆಯುವ ಅಂತಃಶಕ್ತಿ ಅವಶ್ಯಕತೆ ಇದೆ. ಜೊತೆಗೆ ನಮಗೆ ಬೇಕಾಗಿರುವುದು ಪುಣ್ಯಕೋಟಿ ಸತ್ಯ ಹಾಗೂ ಧರ್ಮ ಇವು ನಮ್ಮನ್ನು ಸಂರಕ್ಷಿಸುತ್ತವೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪ್ರಾಚಾರ್ಯ ಎನ್.ಬಿ. ಬಣಕಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾವಿದ್ಯಾಲಯದ ಶೈಕ್ಷಣಿಕ, ಆಡಳಿತಾತ್ಮಕ ಪ್ರಗತಿಯ ಪಕ್ಷಿನೋಟ ನೀಡುವುದರ ಜೊತೆಗೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಧ್ಯಾಪಕರು, ಬೋಧಕೇತರು ಹಾಗೂ ಪಾಲಕರ ಸಹಾಯ-ಸಹಕಾರ ಸ್ಮರಿಸಿದರು. ಮಹಾವಿದ್ಯಾಲಯದ ಶೈಕ್ಷಣಿಕ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದರು.
ವಿದ್ಯಾರ್ಥಿ ಒಕ್ಕೂಟ, ಎನ್ನೆಸ್ಸೆಸ್, ರೆಡ್ ಕ್ರಾಸ್ ಹಾಗೂ ಭೂಗೋಳಶಾಸ್ತ್ರ ವಿಭಾಗದ ಅಭಿವೃದ್ಧಿ ಜತೆಗೆ ಮಹಾವಿದ್ಯಾಲಯದಲ್ಲಿ ಗಿಡಗಳನ್ನು ನೆಡಲು ಪ್ರಮುಖ ಪಾತ್ರವಹಿಸಿದ ಡಾ೤ ಪ್ರಕಾಶ ಹೊಳೇರ ಅವರನ್ನು ಸನ್ಮಾನಿಸಲಾಯಿತು. ಜನತಾ ಶಿಕ್ಷಣ ಸಂಸ್ಥೆಯ ನಿರ್ದೇಶಕ ಮಹೇಶ ಕಾಗಿನೆಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಸ್ವಪ್ನಾ ನಾಡಿಗೇರ ಹಾಗೂ ಭಾರ್ಗವಿ ಪುರೋಹಿತ ಪ್ರಾರ್ಥನೆ ಹಾಡಿದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ, ಪ್ರಧಾನ ಕಾರ್ಯದರ್ಶಿ ಪ್ರಮಿತಾ ಮಂತಗಿ ಹಾಗೂ ಭಾರ್ಗವಿ ಪುರೋಹಿತ ಸ್ವಾಗತಿಸಿದರು. ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಡಾ೤ ಪ್ರಕಾಶ ಹೊಳೇರ ಸಾಂಸ್ಕೃತಿಕ ಚಟುವಟಿಕೆ, ಎನ್ನೆಸ್ಸೆಸ್, ಯುಥ್ ರೆಡ್‌ಕ್ರಾಸ್ ಘಟಕಗಳು ಕೈಗೊಂಡ ಕಾರ್ಯಕ್ರಮಗಳ ವರದಿ ವಾಚಿಸಿದರು. ಪ್ರೊ೤ ವಿ.ಎಲ್. ಪಾಟೀಲ ಕ್ರೀಡಾ ವರದಿ ನೀಡಿದರು. 2012-13ನೇ ಸಾಲಿನ ಮಹಾವಿದ್ಯಾಲಯದ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ಬಿಕಾಂ ಅಂತಿಮ ವರ್ಷ ವಿದ್ಯಾರ್ಥಿನಿ ಪೂಜಾ ಅಥಣಿ ಇವರಿಗೆ ಪ್ರದಾನ ಮಾಡಲಾಯಿತು.
ವಿವಿಧ ವಿಷಯಗಳಲ್ಲಿ ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಾಯಿತು. ವಾರ್ಷಿಕ ಕ್ರೀಡೆಗಳಲ್ಲಿ ಜಯ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಮಧ್ಯ ರೀನಾ ಕಾಟೇಕರ ಹಾಗೂ ಸಂಗಡಿಗರು ಪ್ರಸ್ತುತಪಡಿಸಿದ ನೃತ್ಯ ಮನಮೋಹಕವಾಗಿ ಮೂಡಿ ಬಂದಿತು. ಸ್ವಪ್ನಾ ಕೋಟಿ ಕಾರ್ಯಕ್ರಮ ನಿರ್ವಹಿಸಿದರು. ನವೀದ ಯಾವಗಲ್ಲ, ಮಹದೇವ ಬೆಟಗೇರಿ ಮತ್ತು ಗೌತಮ ಧಾರವಾಡ ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಿಸಿದ್ದರು. ಕಲಾ ವಿಭಾಗದ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ಕಾಡನವರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement