ಶಿಗ್ಗಾಂವಿ: ಬಸವರಾಜ ಬೊಮ್ಮಾಯಿ ಪ್ರಚಾರ
ಶಿಗ್ಗಾಂವಿ: ಪಟ್ಟಣದ ಗಂಗಾಪರಮೇಶ್ವರಿ ದೇವಸ್ಥಾನದಲ್ಲಿ ಸಚಿವ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಿ, 22ನೇ ವಾರ್ಡ್ನಲ್ಲಿ ಮತಯಾಚನೆ ಮಾಡಿದರು. ಅಧಿಕಾರದಲ್ಲಿದ್ದ ಇತರ ಪಕ್ಷಗಳು, ಸಚಿವರು 50 ವರ್ಷಗಳಲ್ಲಿ ಮಾಡಲಾಗದ ಅಭಿವೃದ್ಧಿ ಕಾರ್ಯಗಳನ್ನು ತಾವು ಐದು ವರ್ಷಗಳಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸಿದ್ದು, ಇದನ್ನು ಗಮನಿಸಿ ಮತದಾರರು ತಮ್ಮನ್ನು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು. ಬಿಜೆಪಿ ಮುಖಂಡರಾದ ದೇವಣ್ಣ ಚಾಕಲಬ್ಬಿ, ಜಯಣ್ಣ ಹೆಸರೂರ, ಸುಭಾಷ ಚವ್ಹಾಣ, ಪುರಸಭೆ ಸದಸ್ಯ ಪರಶುರಾಮ ಸೊನ್ನದ, ವೀರಭದ್ರಪ್ಪ ಶಿವಪ್ಪ ಬಾರ್ಕಿ, ಗಂಗಾಮತ ತಾಲೂಕು ಅಧ್ಯಕ್ಷ ಪುಟ್ಟಪ್ಪ ಕಟ್ಟಿಮನಿ, ಪರಶುರಾಮ ಕಳಸದ, ನಿಂಗಪ್ಪ ಸುಣಗಾರ, ಲಕ್ಷ್ಮಣ ಸುಣಗಾರ, ತಿಪ್ಪಣ್ಣ ಬಾರ್ಕಿ, ನಾಗಪ್ಪ ಓಲೆಕಾರ ಇದ್ದರು.
ಪ್ರಭಾಕರ ಮಾಳವದೆ ನಿಧನ
ಶಿಗ್ಗಾಂವಿ: ಪಟ್ಟಣದ ನ್ಯಾಮದೇವ ಸಿಂಪಿ ಸಮಾಜದ ಮುಖಂಡ ಪ್ರಭಾಕರ ಪುಂಡಲೀಕಪ್ಪ ಮಾಳವದೆ (64) ತೀವ್ರ ಅನಾರೋಗ್ಯದಿಂದ ಶುಕ್ರವಾರ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗ ಇದ್ದಾರೆ. ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ಶಾಸಕ ಅಜ್ಜಂಪೀರ ಖಾದ್ರಿ, ಪುರಸಭೆ ಸದಸ್ಯ ಶ್ರೀಕಾಂತ ಬುಳ್ಳಕ್ಕನವರ, ನಾಮದೇವ ಶಿಂಪಿ, ಸುರೇಶ ಮುಳೆ ಸಂತಾಪ ಸೂಚಿಸಿದ್ದಾರೆ.