ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಇಂದು ಬೊಮ್ಮಾಯಿ ನಾಮಪತ್ರ ಸಲ್ಲಿಕೆ

Lingaraj Badiger
Updated On : 15 Apr 2013, 12:14 pm

ಶಿಗ್ಗಾಂವಿ: ಶಿಗ್ಗಾಂವಿ ವಿಧಾನಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷದಿಂದ ನಾಮಪತ್ರವನ್ನು ಏ. 15ರಂದು ಸಲ್ಲಿಸುತ್ತೇನೆ. ಎಲ್ಲ ಸಮಾಜ, ಗ್ರಾಮದ ಪ್ರಮುಖರು, ಕೂಲಿಕಾರ್ಮಿಕರು ಭಾಗವಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸ್ವಇಚ್ಛೆಯಿಂದ ಶಿಗ್ಗಾಂವಿಗೆ ಆಗಮಿಸಬೇಕು ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ತಾಲೂಕಿನ ತಡಸ ಗ್ರಾಮದ ಘೋಡ್ಕೆ ಅವರ ಮನೆಯಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿದ ಸಚಿವರು, ತಡಸ ಗ್ರಾಮ ಹಿರಿದಾದ ಗ್ರಾಮವಾಗಿದ್ದು, ಅಲ್ಲದೆ ಮಲೆನಾಡು ಪ್ರದೇಶದಲ್ಲಿ ಇದ್ದುದರಿಂದ ಎಲ್ಲಾ ಸಮಾಜದ ಬಾಂಧವರು ತಮ್ಮ ಯಾವುದೇ ಸಮಸ್ಯೆಗಳನ್ನು ನಾವೇಲ್ಲರೂ ಕೂಡಿ ಕುಳಿತು ಬಗೆಹರಿಸೋಣ. ಒಂದಾಗಿ ಚುನಾವಣೆ ಎದುರಿಸೋಣ ಎಂದು ತಿಳಿಸಿದವರು. ಎಲ್ಲರೂ ಹೆಚ್ಚಿನ ಸಹಕಾರ, ಬೆಂಬಲ ಸಿಗುತ್ತಿದೆ ಎಂದರು.  ತಾಪಂ ಮಾಜಿ ಸದಸ್ಯ ಕಿರಣ ಅವರಾದಿ, ಎಪಿಎಂಸಿ ಮಾಜಿ ಅಧ್ಯಕ್ಷ ಭರಮಗೌಡ್ರ ಪಾಟೀಲ, ಜಿ ಪಂ ಸದಸ್ಯರಾದ ಸಿ.ಎಸ್. ಪಾಟೀಲ, ಗ್ರಾಪಂ ಅಧ್ಯಕ್ಷ, ಸದಸ್ಯರು ವಿವಿಧ ಸಮಾಜದ ಭಾಂದವರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಅಂಬೇಡ್ಕರ್ ಜಯಂತಿ
ಶಿಗ್ಗಾಂವಿ: ತಾಲೂಕಾಡಳಿತ, ತಾಪಂ, ಪುರಸಭೆ, ಸಮಾಜ ಕಲ್ಯಾಣ ಇಲಾಖೆ, ತಾಲೂಕಿನ ವಿವಿಧ ದಲಿತ ಒಕ್ಕೂಟಗಳ ಆಶ್ರಯದಲ್ಲಿ ಡಾ೤ ಬಿ.ಆರ್. ಅಂಬೇಡ್ಕರ್ 122ನೇ ಜನ್ಮ ದಿನಾಚರಣೆಯನ್ನು ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ  ಡಾ೤ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲೆ ಹಾಕುವ ಮೂಲಕ ಸಾಂಕೇತಿಕವಾಗಿ ಆಚರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement