ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಜನ ಬಿಜೆಪಿ ಕ್ಷಮಿಸಲ್ಲ

Lingaraj Badiger
Updated On : 15 Apr 2013, 12:14 pm

ಬ್ಯಾಡಗಿ: ಆಪರೇಶನ್ ಕಮಲದ ಮೂಲಕ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸಿದ ಬಿಜೆಪಿಯನ್ನು ರಾಜ್ಯದ ಜನರು ಕ್ಷಮಿಸುವುದಿಲ್ಲ. ಪ್ರಸಕ್ತ ಚುನಾವಣೆಯಲ್ಲಿ ಸುಭದ್ರ ಸರ್ಕಾರಕ್ಕಾಗಿ ಕಾಂಗ್ರೆಸ್ ಬೆಂಬಲಿಸಲಿದ್ದಾರೆಂದು ಪಕ್ಷದ  ಅಭ್ಯರ್ಥಿ ಬಸವರಾಜ ಶಿವಣ್ಣವರ ಹೇಳಿದರು. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿದ ಅವರು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ತಾಲೂಕಿನ ಮಹತ್ವಾಕಾಂಕ್ಷಿ ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ಶ್ರಮಿಸುವೆ. ಗ್ರಾಮೀಣ ಜನರಿಗೆ ಮೂಲಭೂತ ಸೌಲಭ್ಯ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ವಿವಿಧ ಯೋಜನೆ ಜಾರಿಗೆ ತಂದಿದೆ. ತುಂಗಾ ಮೇಲ್ದಂಡೆ ಯೋಜನೆಗೆ ಅನುದಾನ ಒದಗಿಸಿದೆ ಎಂದರು. ಬಿಜೆಪಿ ಮತ್ತು ಕೆಜೆಪಿ ಶಕ್ತಿ ಸಿದ್ಧಾಂತವೇ ಅಂತಿಮ ಎಂಬಂತೆ ಬಲ ಪ್ರದರ್ಶನದಲ್ಲಿ ತೊಡಗಿದ್ದು, ಸೋಲುವ ಭೀತಿಯಲ್ಲಿವೆಯ ಶಿಸ್ತಿನ ಪಕ್ಷ ಎನ್ನುತ್ತಲೇ ಅಶಿಸ್ತನ್ನು ಪ್ರದರ್ಶಿಸಿದ ಬಿಜೆಪಿ ಸರ್ಕಾರ ರಾಜ್ಯಕ್ಕೆ ಮಾರಕವಾಗಿದೆ. ವಿಧಾನಸೌಧವನ್ನು ತಮ್ಮಿಷ್ಟಕ್ಕೆ ತಕ್ಕಂತೆ ಬಳಸಿಕೊಂಡಿದ್ದನ್ನು ರಾಜ್ಯದ ಆರು ಕೋಟಿ ಜನ ನೋಡುತ್ತ ಬಂದಿದ್ದಾರೆ. ಇನ್ನು ಅದಕ್ಕೆ ಅಧಿಕಾರ ತಿರುಕನ ಕನಸೇ ಸರಿ ಎಂದರು. ಬಸವರಾಜ ಸವಣೂರ, ಎಚ್.ಎಚ್. ದೊಡ್ಮನಿ, ಸುರೇಶಗೌಡ ಪಾಟೀಲ, ದಾನಪ್ಪ ಚೂರಿ, ಲಿಂಗಪ್ಪ ಕೊಂಬಳಿ, ರಮೇಶ್ ಸುತ್ತಕೋಟಿ, ಶೇಖಣ್ಣ ಮೈಲಾರ, ಬೀರಪ್ಪ ಬಣಕಾರ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement