ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಿ.ಎಂ. ಉದಾಸಿ ರು. 12.85 ಲಕ್ಷದ ಒಡೆಯ

Lingaraj Badiger
Updated On : 15 Apr 2013, 12:13 pm

ಹಾನಗಲ್: ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಮತಕ್ಷೇತ್ರದಿಂದ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಚಿವ ಸಿ.ಎಂ. ಉದಾಸಿ, 800 ಗ್ರಾಮ ಚಿನ್ನ, 6 ಕೆಜಿ ಬೆಳ್ಳಿ ಸೇರಿದಂತೆ ಒಟ್ಟು ರು. 12,85,152ಗಳ ಆಸ್ತಿಪಾಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ.
ಶನಿವಾರ ಮಧ್ಯಾಹ್ನ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಚುನಾವಣಾಧಿಕಾರಿಗಳಿಗೆ ಸ್ವ-ವಿವರ ಸೇರಿದಂತೆ ಒಟ್ಟಾರೆ ಆಸ್ತಿಯ ಮೌಲ್ಯವನ್ನು ಉದಾಸಿ ಘೋಷಿಸಿಕೊಂಡಿದ್ದು, ಅದರಲ್ಲಿ ಆಯ್ದೆ ವಿಷಯಗಳ ಮೇಲೆ ಇಲ್ಲಿ ಬೆಳಕು ಚೆಲ್ಲಲಾಗಿದೆ.
ಕ್ಲೀನ್ ಹ್ಯಾಂಡ್: ಅಪರಾಧ ಪ್ರಕರಣಗಳಲ್ಲಿ ಯಾವುದೇ ರೀತಿಯಿಂದ ಭಾಗಿಯಾಗಿರುವ ಬಗ್ಗೆ ಹಾಗೂ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗದೆ ಕ್ಲೀನ್ ಹ್ಯಾಂಡ್ ಆಗಿದ್ದಾಗಿ ಘೋಷಿಸಿಕೊಂಡ ಉದಾಸಿ, ಸಂಜ್ಞಾನಕ್ಕೆ ಸಂಬಂಧಿಸಿದಂತೆ ಕೆಲ ಮೊಕದ್ದಮೆಗಳನ್ನು ಎದುರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಠೇವಣಿ ವಿವರ: ತಮ್ಮ ಹಾಗೂ ತಮ್ಮ ಪತ್ನಿ ನೀಲಾಂಬಿಕಾ ಉರ್ಫ್ ನೀಲಮ್ಮ ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳಲ್ಲಿ ಹೊಂದಿರುವ ಒಟ್ಟು ಠೇವಣಿ ಮೊತ್ತವನ್ನು ಈ ರೀತಿ ಪ್ರಕಟಿಸಿದ್ದಾರೆ. ಉದಾಸಿ ಕೈಯಲ್ಲಿ ನಗದು ರು. 10 ಲಕ್ಷ ಹೊಂದಿದ್ದು, ಬೆಂಗಳೂರಿನ ವಿಜಯ ಬ್ಯಾಂಕ್ ಶಾಖೆಯಲ್ಲಿ 6,72,703.52, ಹಾನಗಲ್‌ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಉಳಿತಾಯ ಖಾತೆಯಲ್ಲಿ 5,49,619. ಅರ್ಬನ್ ಬ್ಯಾಂಕ್‌ನಲ್ಲಿ ರು. 13,438, ವಿಜಯಾ ಬ್ಯಾಂಕ್‌ನಲ್ಲಿ ರು. 10 ಸಾವಿರ ಟರ್ಮ್ ಡಿಪಾಸಿಟ್ ಹಾಗೂ ಎಸ್‌ಬಿಐನಲ್ಲಿ ರು. 16,50,000ಗಳನ್ನು ಸ್ವಂತಕ್ಕೆ ಹೊಂದಿದ್ದಾರೆ. ಪತ್ನಿ ನೀಲಮ್ಮ ಹೆಸರಿನಲ್ಲಿ ಹಾನಗಲ್ ತಾಲೂಕಿನ ಮಹಿಳಾ ಸಹಕಾರಿ ಪತ್ತಿನ ಸಂಘದಲ್ಲಿ ರು. 50 ಸಾವಿರ ಎಫ್‌ಡಿ, ಕರ್ನಾಟಕ ವಿಕಾಸ ಬ್ಯಾಂಕ್‌ನಲ್ಲಿ ರು. 44,619ಗಳ ಎಫ್‌ಡಿ ಹೊಂದಿದ್ದಾರೆ.
ಎಲ್ಲೆಲ್ಲಿ ಹೂಡಿಕೆ: ಹಾನಗಲ್ ಅರ್ಬನ್ ಬ್ಯಾಂಕ್‌ನಲ್ಲಿ ರು. 15,000, ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆ ರು. 1000, ಸಹಕಾರಿ ಸಂಘಟನೆಗಳಲ್ಲಿ ರು. 2,500, ಚೆಂಬಲ್ ಫರ್ಟಿಲೈಸರ್ಸ್‌ನಲ್ಲಿ ರು. 5 ಸಾವಿರ, ಮಹಿಳಾ ಪತ್ತಿನ ಸಹಕಾರಿ ಬ್ಯಾಂಕ್‌ನಲ್ಲಿ ರು. 1500. ಸ್ವಂತಕ್ಕೆ ರು. 3.50 ಲಕ್ಷ ಮೌಲ್ಯದ ಮ್ಯಾಸಿ ಫರ್ಗೂಶನ್ ಟ್ರ್ಯಾಕ್ಟರ್ ಮತ್ತು ಟ್ರೇಲರ್ ಹೊಂದಿದ್ದಾರೆ.
ಸ್ಥಿರಾಸ್ತಿ ವಿವರ: ಮಹಾರಾಜಪೇಟೆಯಲ್ಲಿ ಕ್ರಮವಾಗಿ 10 ಹಾಗೂ 10.15 ಎಕರೆ ಕೃಷಿಭೂಮಿ, ಹಾನಗಲ್ ಹಾಗೂ ಹಳೇಕೊಟಿಯಲ್ಲಿ ರು. 25 ಲಕ್ಷ ಮೌಲ್ಯದ ಕೃಷಿಯೇತರ ಭೂಮಿ ಹೊಂದಿದ್ದಾರೆ.  ಸ್ವಯಂ ಕೃಷಿಕರಾಗಿರುವುದನ್ನು ಘೋಷಿಸಿಕೊಂಡಿರುವ ಉದಾಸಿ ಪತ್ನಿ ನೀಲಮ್ಮ ಅವರ ಹೆಸರಿನಲ್ಲಿ ಹೂಡಿರುವ ಬಂಡವಾಳ ಹೊರತುಪಡಿಸಿ ತಮ್ಮ ಅಧೀನದಲ್ಲಿರುವ ಆಸ್ತಿಯಲ್ಲಿ ಯಾರೂ ಅವಲಂಬಿತರಾಗಿಲ್ಲ ಎಂಬುದನ್ನು ತಿಳಿಸಿದ್ದಾರೆ. 1953ರಲ್ಲಿ ಹಾನಗಲ್‌ನ ನ್ಯೂ ಇಂಗ್ಲಿಷ್ ಸ್ಕೂಲ್‌ನಲ್ಲಿ 8ನೇ ತರಗತಿವರೆಗೆ ಉದಾಸಿ ಓದಿರುವುದಾಗಿಯೂ ದೃಢಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement