ಎಸ್ಎಂಎಸ್ ಮೂಲಕ ಪ್ರಚಾರ: ನಿಬಂಧನೆ ಪಾಲಿಸಿ
ಹಾವೇರಿ: ಪ್ರಸಕ್ತ ವಿಧಾನಸಭಾ ಚುನಾವಣೆ ಕಾಲಕ್ಕೆ ಜಿಲ್ಲೆಯ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮೊಬೈಲ್ನ (ಗುಂಪು) ಎಸ್ಎಂಎಸ್ ಮೂಲಕ ಪ್ರಚಾರ ಕೈಗೊಳ್ಳುವ ಪ್ರಸಂಗವಿದ್ದಲ್ಲಿ ಚುನಾವಣಾ ಆಯೋಗದ ಪ್ರಚಾರ ಸಂಬಂಧಿ ನಿಬಂಧನೆಗಳನ್ನು (ಅನೆಕ್ಸರ್ 27, 28) ಮತ್ತು ಅಸಂಬದ್ಧ ಎಸ್ಎಂಎಸ್ಗಾಗಿ ನಿಬಂಧನೆ ನಂ. 63 ಕಡ್ಡಾಯವಾಗಿ ಪಾಲಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ತಿಳಿಸಿದ್ದಾರೆ. ಈ ನಿಬಂಧನೆಗಳ ಪ್ರಕಾರ ಬಲ್ಕ್ ಎಸ್ಎಂಎಸ್ ಮೂಲಕ ಪ್ರಚಾರ ಕೈಗೊಳ್ಳುವವರು ಎಸ್ಎಂಎಸ್ನ ವಿಷಯವನ್ನು ಮುಂಚಿತವಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಮಾಧ್ಯಮ ಪ್ರಮಾಣೀಕರಣ ಸಮಿತಿಯ ಪೂರ್ವಾನುಮತಿ ಪಡೆಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ.