ಕಾಂಗ್ರೆಸ್ನಿಂದ ಕೆ.ಬಿ. ಕೋಳಿವಾಡ ನಾಮಪತ್ರ ಸಲ್ಲಿಕೆ
ರಾಣಿಬೆನ್ನೂರು: ಮೇ 5ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ರಾಣಿಬೆನ್ನೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಸಚಿವ ಕೆ.ಬಿ. ಕೋಳಿವಾಡ ತಮ್ಮ ಅಪಾರ ಬೆಂಬಲಿಗರೊಂದಿಗೆ ನಗರದ ಕಾಟನ್ ಮಾರುಕಟ್ಟೆ ಹತ್ತಿರವಿರುವ ಗಣೇಶ ದೇವಸ್ಥಾನದಿಂದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಕಾಟನ್ ಮಾರುಕಟ್ಟೆಯ ದೇವಸ್ಥಾನದ ಮಹಾದ್ವಾರದಿಂದ ಹೊರಟ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕಾಂಗ್ರಸ್ ಕಾರ್ಯಕರ್ತರು ಹಾಗೂ ಕೆ.ಬಿ. ಕೋಳಿವಾಡರ ಅಭಿಮಾನಿಗಳು ಜಯಘೋಷಗಳನ್ನು ಕೂಗಿದರು. ಕೃಷ್ಣಪ್ಪ ಕಂಬಳಿ, ಪುಟ್ಟಪ್ಪ ಮರಿಯಮ್ಮನವರ, ರವೀಂದ್ರಗೌಡ ಪಾಟೀಲ, ಸಣ್ಣತಮ್ಮಪ್ಪ ಬಾರ್ಕಿ, ರಾಮಣ್ಣ ನಾಯ್ಕ, ಮಾಲಾಬಾಯಿ ನಾಯ್ಕ,ರತ್ನಾ ಪುನಿತ, ಬಿಬಿಜಾನ ನಂದ್ಯಾಲ, ಬಾಷಾಸಾಬ ನೀಲಗಾರ, ಅಮಿರಅಹ್ಮದ್ ನಾರಂಗಿ, ಅಲ್ಲಾಭಕ್ಷ ಬೆನಕನಕೂಂಡ, ಎಂ.ಜಿ. ರಟ್ಟಿಹಳ್ಳಿ, ಪಾರವ್ವ ಲಮಾಣಿ, ಶೀತವ್ವ ಲಮಾಣಿ, ಲಚಮವ್ವ ಲಮಾಣಿ, ತಾಲೂಕಿನ ತುಮ್ಮಿನಕಟ್ಟಿ, ಮೇಡ್ಲೆರಿ, ಚಳಗೇರಿ, ಮಾಕನೂರು, ಕಮದೋಡ ಗ್ರಾಮಗಳ ಸಾವಿರಾರು ಕಾರ್ಯರ್ತರು, ಅಭಿಮಾನಿಗಳು ಮೆರವಣಿಗೆಯಲ್ಲಿದ್ದರು.