ಜೆಡಿಎಸ್ನಿಂದ ಡಾ. ಹಂಡೆ ನಾಮಪತ್ರ ಸಲ್ಲಿಕೆ
ರಾಣಿಬೆನ್ನೂರು: ತಾಲೂಕು ಜೆಡಿಎಸ್ ಮುಖಂಡ ಹಾಗೂ ಪಕ್ಷದ ಅಭ್ಯರ್ಥಿ ಡಾ ಎಂ.ಆರ್. ಹಂಡೆ ತಮ್ಮ ಬೆಂಬಲಿಗರೊಂದಿಗೆ ಪಾದಯಾತ್ರೆ ಮುಖಾಂತರ ತಹಸೀಲ್ದಾರ್ ಕಚೇರಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು. ಮುಖಂಡರಾದ ಸಿದ್ದಣ್ಣ ಅಡವೇರ, ಮಹಿಳಾ ವೈದ್ಯರಾದ ಸುಲೋಚನಾ ಹಂಡೆ, ಮಹ್ಮದಗೌಸ ಹುಣಶಿಕಟ್ಟಿ, ಬಸವರಾಜ ಹುಚ್ಚಗರ್ಕಿ ಹಾಗೂ ಪಾಟೀಲ ಇದ್ದರು.
ಗಂಗಾಧರ ಹಾದಿಮನಿ ನಾಮಪತ್ರ ಸಲ್ಲಿಕೆ
ರಾಣಿಬೆನ್ನೂರು: ಬಿಎಸ್ಸಾಆರ್ ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಹಾಗೂ ತಾಲೂಕು ಬಿಎಸ್ಸಾರ್ ಕಾಂಗ್ರೆಸ್ ಮುಖಂಡರಾದ ಗಂಗಾಧರ ಹಾದಿಮನಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆಂದು ಗಂಗಾಧರ ಹಾದಿಮನಿಯವರ ಅಭಿಮಾನಿಗಳು ತಿಳಿಸಿದರು.
ರುದ್ರಪ್ಪ, ಮಲ್ಲೇಶಪ್ಪ ನಾಮಪತ್ರ ಸಲ್ಲಿಕೆ
ಹಾವೇರಿ: ಹಾವೇರಿ ವಿಧಾನಸಭಾ ಮತಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ರುದ್ರಪ್ಪ ಲಮಾಣಿ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಮಲ್ಲೇಶಪ್ಪ ಹರಿಜನ ಸೋಮವಾರ ನಾಮಪತ್ರ ಸಲ್ಲಿಸಿದರು. ಅಪಾರ ಕಾರ್ಯಕರ್ತರು, ಬೆಂಬಲಿಗರು ಹಾಗೂ ಹಿತೈಷಿಗಳೊಂದಿಗೆ ಮೆರವಣಿಗೆ ಮೂಲಕ ಮಿನಿವಿಧಾನಸೌಧದಲ್ಲಿರುವ ತಹಸೀಲ್ದಾರ್ ಕಚೇರಿಗೆ ತೆರೆಳಿದ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು, ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಳಿಸಿದರು. ಕಾಂಗ್ರೆಸ್ ಅಭ್ಯರ್ಥಿ ಲಮಾಣಿ, ಬಿಜೆಪಿ ಅಭ್ಯರ್ಥಿ ಹರಿಜನ, ಈ ಬಾರಿ ತಮ್ಮ ಗೆಲುವು ನಿಶ್ಚಿತ ಎಂದು ಅಭಿಪ್ರಾಯಿಸಿದರು.