ಶಿಷ್ಯವೇತನ: ವಿದ್ಯಾರ್ಥಿಗಳ ಪ್ರತಿಭಟನೆ
ಶಿಗ್ಗಾಂವಿ: ಸರ್ಕಾರಿ ಕೈಗಾರಿಕೆ ತರಬೇತಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಮಂಜೂರಾದ ಶಿಷ್ಯವೇತನ ವಿತರಿಸಲು ಕೈಗಾರಿಕಾ ತರಬೇತಿ ಶಿಕ್ಷಣ ಇಲಾಖೆ ಜೆ.ಡಿ. ರಮೇಶ ಆದೇಶಿಸಿದರೂ ಕಾಲೇಜಿನ ಪ್ರಾಚಾರ್ಯ ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸಿ ಸ್ಥಳೀಯ ನೂರಾರು ವಿದ್ಯಾರ್ಥಿಗಳು ಕಾಲೇಜಿಗೆ ಬೀಗ ಹಾಕಿ ಸೋಮವಾರ ಪ್ರತಿಭಟಿಸಿದರು.
ಪ್ರಾಚಾರ್ಯ ಆರ್.ಡಿ. ಮೊಕಾಶಿ ಹಲವು ಹಗರಣಗಳಿಗೆ ಕಾರಣರಾಗಿದ್ದಾರೆ. ಸರ್ಕಾರ ವಿದ್ಯಾರ್ಥಿಗಳಿಗೆ ಸರಿಯಾಗಿ ಶಿಷ್ಯವೇತನ ತಲುಪಿಸುತ್ತಿಲ್ಲ. ಅದರಿಂದ ಸಾಕಷ್ಟು ಬಡಮಕ್ಕಳಿಗೆ ತೊಂದರೆಯಾಗಿದೆ. ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶ ಸಂದರ್ಭದಲ್ಲಿ ವಿವಿಧ ಸಾಮಗ್ರಿ ಒದಗಿಸುವುದಾಗಿ ಪ್ರತಿ ವಿದ್ಯಾರ್ಥಿಯಿಂದ ರು. 1 ಸಾವಿರ, ಸ್ಪಂದನಾ ಸಂಘದ ಪ್ರವೇಶಕ್ಕೆಂದು ರು. 200, ಎಂಇಎಸ್ ತರಬೇತಿಗೆ ರು. 3 ಲಕ್ಷ ಸಂಗ್ರಹಿಸಿದ್ದರಲ್ಲಿ ಅವ್ಯವಹಾರ ನಡೆಸ್ದಿದಾರೆಂದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಆರೋಪಿಸಿದರು.
ಕಾಲೇಜಿನಲ್ಲಿ ಒಟ್ಟು 12 ಟ್ರೇಡ್‌ಗಳು ನಡೆಯುತ್ತಿದ್ದು, ಪ್ರತಿ ಟ್ರೇಡಿಗೆ 18ರಿಂದ 21 ವಿದ್ಯಾರ್ಥಿಗಳಿದ್ದಾರೆ. ಆ ಪೈಕಿ 3 ಟ್ರೇಡಿನ ವಿದ್ಯಾರ್ಥಿಗಳಿಗೆ ಮಾತ್ರ ಹಣ ಮರಳಿ ನೀಡಿದ್ದಾರೆ. ಇನ್ನುಳಿದ ವಿದ್ಯಾರ್ಥಿಗಳ ಹಣ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಬಿವಿಪಿ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ತವರಿಮಠ ಪ್ರತಿಭಟನೆ ನೇತೃತ್ವ ವಹಿಸ್ದಿದರು. ಸುಭಾಸ ಮಾದರ, ನಿರಂಜನ ಕಲ್ಲನಗೌಡರ, ಮಲ್ಲೇಶಪ್ಪ ಗಣಪ್ಪನವರ, ಸೋಮಲಿಂಗಪ್ಪ ಕಾರಡಗಿ, ರವಿ ವೀರಪ್ಪನವರ, ಫಕ್ಕೀರೇಶ ಮರಡೂರ, ಕೆ.ಎಚ್. ಹಂಸರಾಜ, ಶಶಿಕುಮಾರ, ನಿಂಗಪ್ಪ ಯಲವಿಗಿ, ಎಂ.ಎನ್. ಇಂಗಳಗಿ, ದಾವಲ, ಗಾಫರ ಕುರಟ್ಟಿ, ಅಸ್ಲಂ ನದಾಫ್, ವಿ.ಎಸ್. ಗಿರಿಮಠ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಾಚಾರ್ಯ ಆರ್.ಡಿ. ಮೊಕಾಶಿ ಅಮಾನತು
ಶಿಗ್ಗಾಂವಿ: ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಧಾರವಾಡ ಕೈಗಾರಿಕೆ ತರಬೇತಿ ಶಿಕ್ಷಣ ಇಲಾಖೆ ಜೆ.ಡಿ. ರಮೇಶ ಮಾತನಾಡಿ, ಈ ಹಿಂದೆ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಎಲ್ಲ ದಾಖಲೆಗಳನ್ನು ಸಂಪೂರ್ಣ ಪರಿಶೀಲಿಸಿದಾಗ ಮೇಲ್ನೋಟಕ್ಕೆ ಅಕ್ರಮ ನಡೆದಿರುವುದು ಕಂಡು ಬಂದಿದೆ.
ಪ್ರಾಚಾರ್ಯ ಆರ್.ಡಿ. ಮೊಕಾಶಿ, ಸಿಬ್ಬಂದಿಗಳಾದ ಚವ್ಹಾಣ, ಹೊಸಪೇಟಿ, ಸಾತಗೊಂಡ ಅವರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ವರದಿ ಕಳಿಸಲಾಗಿತ್ತು. ಕೈಗಾರಿಕೆ ತರಬೇತಿ ಶಿಕ್ಷಣ ಇಲಾಖೆ ಆಯುಕ್ತರು ಅದಕ್ಕೆ ತಕ್ಷಣ ಸ್ಪಂದಿಸಿ ಪ್ರಾಚಾರ್ಯ ಆರ್.ಡಿ. ಮೊಕಾಶಿ ಅವರಿಗೆ ಅಮಾನತು ಆದೇಶ ಹೊರಡಿಸ್ದಿದಾರೆ. ಅಲ್ಲದೆ, ಹೊಸದಾಗಿ ಸಹಾಯಕ ನಿರ್ದೇಶಕ ಸುಭಾಸ ಗೌಡರ ಅವರನ್ನು ಈ ಕಾಲೇಜಿನ ಪ್ರಾಚಾರ್ಯರನ್ನಾಗಿ ನೇಮಿಸಿ ಆದೇಶ ನೀಡ್ದಿದಾರೆ ಎಂದು ತಿಳಿಸಿದರು.