ಬಿಎಸ್ವೈ ಅಭಿವೃದ್ಧಿ ಕಾರ್ಯ ಕೆಜೆಪಿ ಗೆಲವಿಗೆ ಸಹಕಾರಿ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಏ. 16
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅಭಿವೃದ್ಧಿ ಕಾರ್ಯಗಳು ಕರ್ನಾಟಕ ಜನತಾ ಪಕ್ಷದ ಚುನಾವಣೆ ಗೆಲುವಿಗೆ ಸಹಕಾರಿಯಾಗಲಿವೆ ಎಂದು ಮಾಜಿ ಸಚಿವ ಹಾನಗಲ್ಲ ವಿಧಾನಸಭಾ ಕೆಜೆಪಿ ಅಭ್ಯರ್ಥಿ ಸಿ.ಎಂ. ಉದಾಸಿ ವಿಶ್ವಾಸ ವ್ಯಕ್ತಪಡಿಸಿದರು.
ಹಾನಗಲ್ಲ ನಗರದಲ್ಲಿ ಚುನಾವಣಾ ಪ್ರಚಾರ ಕೈಕೊಂಡು ಮಾತನಾಡಿದ ಅವರು, ಯಡಿಯೂರಪ್ಪನವರು ಕೇವಲ ಒಂದು ಜಾತಿಗೆ ಸೀಮಿತವಾಗಿರದೇ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಕೊಟ್ಯಂತರ ರುಪಾಯಿ ಅನುದಾನ ನೀಡಿದ್ದಾರೆ ಎಂದರು.
ಮಠಮಾನ್ಯಗಳ, ಮುಸ್ಲಿಂ ಸಮುದಾಯದ ಪ್ರಾರ್ಥನಾ ಮಂದಿರ, ಎಲ್ಲ ವರ್ಗಗಳ ಜನತೆಗೆ ಸಮುದಾಯಭವನ ನಿರ್ಮಾಣಕ್ಕೆ ಬಿ.ಎಸ್. ಯಡಿಯೂರಪ್ಪ ಒತ್ತು ನೀಡಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಎಲ್ಲ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಿರುವುದು ಎಲ್ಲ ಪಕ್ಷಗಳವರೂ ಕರ್ನಾಟಕ ಜನತಾ ಪಕ್ಷದತ್ತ ವಲಸೆ ಬರುವಂತೆ ಮಾಡಿದೆ ಎಂದರು.
ಸೇರ್ಪಡೆ: ಈ ಸಂದರ್ಭದಲ್ಲಿ ಹಸನಮಿಯ್ಯಾ ಮಂಚಗಿ, ನನ್ನೆಸಾಬ ಮೋದುಲಾಲನವರ, ಬಾಷಾಸಾಬ ಮಂಚಗಿ, ರೂಪಸಾಬ ಅಣ್ಣಿಗೇರಿ, ನನ್ನೆಬಾ ಚಿಕ್ಕೇರಿ, ಬಸೀರ ಬಾಳೂರ, ಬಾಷಾಸಾಬ ನೆಗಳೂರ, ಬಾಬಾಜಾನ ಕೂಸನೂರ, ನಿಂಗಪ್ಪ ಕಾಶಂಬಿ ಸೇರಿದಂತೆ ಮುಖಂಡರು, ಅನೇಕ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಸಿ.ಎಂ. ಉದಾಸಿ ನೇತೃತ್ವದಲ್ಲಿ ಕೆಜೆಪಿಗೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಂಜುನಾಥ ನಾಗಜ್ಜನವರ, ಗಣೇಶ ಮೂಡ್ಲಿಯವರ, ದಯಾನಂದ ನಾಗಜ್ಜನವರ, ಬಾಬಾಜಾನ ಕೊಂಡವಾಡಿ, ದೇವೆಂದ್ರಪ್ಪ ಮೂಡ್ಲಿಯವರ, ನಾಗೇಂದ್ರ ಬೇವಿನಮರದ, ನಾಗರಾಜ ತುಮರಿಕೊಪ್ಪ ಮುಂತಾದವರು ಉಪಸ್ಥಿತರಿದ್ದರು.
ವಾಹನವಿಲ್ಲದೆ ಕೆಜೆಪಿ ಅಭ್ಯರ್ಥಿ ಸಿ.ಎಂ. ಉದಾಸಿ ನಾಮಪತ್ರ ಸಲ್ಲಿಕೆ
ಹಾನಗಲ್: ಮಾಜಿ ಸಚಿವ ಹಾಗೂ ಕೆಜೆಪಿ ಅಭ್ಯರ್ಥಿ ಸಿ.ಎಂ. ಉದಾಸಿ ತಾಲೂಕಿನ ಹಸಾಬಾದಿ ಗ್ರಾಮದಲ್ಲಿ ಏ. 15ರಂದು ಅಪಾರ ಬೆಂಬಲಿಗರೊಂದಿಗೆ ಮತಯಾಚನೆ ನಡೆಸಿದಾಗ ಯಾವುದೇ ರೀತಿಯ ವಾಹನ ಉಪಯೋಗಿಸಿರಲಿಲ್ಲ.
ಏ. 16ರಂದು ಕನ್ನಡಪ್ರಭದಲ್ಲಿ ಪ್ರಕಟಗೊಂಡಿರುವ ಛಾಯಾಚಿತ್ರ, ಉದಾಸಿ ನಾಮಪತ್ರ ಸಲ್ಲಿಸುವಾಗ ಉಪಯೋಗಿಸಿದ ವಾಹನದಾಗಿದ್ದು, ಇದು ಕಣ್ತಪ್ಪಿನಿಂದ ಚುನಾವಣಾ ಪ್ರಚಾರದ ಸುದ್ದಿಯೊಂದಿಗೆ ಪ್ರಕಟಗೊಂಡಿದೆ.
ಸಿ.ಎಂ. ಉದಾಸಿ ಗೆಲವಿಗಾಗಿಮೈಲಾರಲಿಂಗೇಶ್ವರಗೆ ಪೂಜೆ
ಕನ್ನಡಪ್ರಭ ವಾರ್ತೆ, ಹಾನಗಲ್, ಏ. 16
ಹಾನಗಲ್ ವಿಧಾನಸಭಾ ಮತಕ್ಷೇತ್ರದ ಕರ್ನಾಟಕ ಜನತಾ ಪಕ್ಷದ ಹುರಿಯಾಳು, ಮಾಜಿ ಸಚಿವ ಸಿ.ಎಂ. ಉದಾಸಿ ಅವರ ಗೆಲುವಿಗಾಗಿ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಅಭಿಮಾನಿಗಳಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.
ಕುಂಬಾರ ಓಣಿಯಲ್ಲಿರುವ ಶ್ರೀಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ 16ನೇ ವಾರ್ಡ್ನ ಕೆಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸುವ ಮೂಲಕ ಉದಾಸಿ ಅವರ ಗೆಲುವಿಗೆ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ದೀಪಕ ಕಲಾಲ, ಪರಶುರಾಮ ತಳವಾರ, ರವಿ ಪುರದ, ಶಂಭು ಆಲದಕಟ್ಟಿ, ದ್ಯಾವಣ್ಣ ಹಳೆಕೋಟಿ, ಲಕ್ಷ್ಮಣ ಹಾನಗಲ್, ನಿಂಗಪ್ಪ ಕಾಳೇರ ಮತ್ತಿತರರು ಪಾಲ್ಗೊಂಡಿದ್ದರು.