ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಭಾಗ್ಯಲಕ್ಷ್ಮೀ ಯೋಜನೆ ಬಡ ಮಕ್ಕಳ 'ಭಾಗ್ಯ'

Lingaraj Badiger
Updated On : 17 Apr 2013, 12:59 pm

ಬ್ಯಾಡಗಿ: ಕೆಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರ ಅವರ ಪತ್ನಿ ಹೇಮಲತಾ ನಗರದ ವಿವಿಧೆಡೆ ಮಂಗಳವಾರ ಪ್ರಚಾರ ನಡೆಸಿದರು.
ಪಟ್ಟಣದ ವಿದ್ಯಾನಗರ, ಶಿವಪುರ ಬಡಾವಣೆ, ಬಸವೇಶ್ವರ ನಗರಗಳಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಕೆಜೆಪಿ ಪರ ಮತ ಹಾಕುವಂತೆ ಮನವಿ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿದಂತೆ ಎನ್ನುವಂತೆ ದೇವತಾ ಸ್ಥಾನಮಾನ ಸಿಗುವ ಜಾಗದಲ್ಲಿ ಭ್ರೂಣ ಹತ್ಯೆಯಂತಹ ಹೀನಾಯ ಕೃತ್ಯಗಳಲ್ಲಿ ತೊಡಗಿದ್ದ ಜನರಿಗೆ ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಬಡ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೊಳಿಸಿದರು. ಇದರಿಂದ ಪ್ರೇರಿತಳಾದ ನಾನು ಕೆಜೆಪಿ ಪರ ಪ್ರಚಾರದಲ್ಲಿ ತೊಡಗಿರುವುದಾಗಿ ತಿಳಿಸಿದರು. ಇಂಧನ ಹಾಗೂ ವಿದ್ಯುತ್ ಖಾತೆಯನ್ನು ನಿಭಾಯಿಸಲಾಗದೇ ಕೈಬಿಟ್ಟು ಪಲಾಯನಗೈದ ಸಚಿವ ಈಶ್ವರಪ್ಪ ಖಾತೆ ತೊರೆದು ಪಲಾಯನಗೈದ ಸಂದರ್ಭದಲ್ಲಿ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಒಬ್ಬ ಮಹಿಳೆಯಾಗಿ ರಾಜ್ಯದಲ್ಲಿ ರೈತರ ಪಂಪಸೆಟ್‌ಗಳಿಗೆ ಜೊತೆಗೆ ವಿದ್ಯುತ್ ಕೊರತೆಯಾಗದಂತೆ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿ ಯಶಸ್ವಿಯಾಗಿದ್ದಾರೆ ಎಂದರು.
ರಾಜ್ಯದ ಜನರ ಅಭಿವೃದ್ಧಿ ಹಾಗೂ ಶ್ರೇಯಸ್ಸಿಗೋಸ್ಕರ ತಮ್ಮ ಜೀವವನ್ನೇ ಮುಡುಪಾಗಿಟ್ಟುರುವ ಉತ್ತಮ ಆಡಳಿತ ನೀಡುವ ತಂಡವನ್ನು ಹೊಂದಿರುವ ಕೆಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ ಎಂದರು. ಈ ಸಂದರ್ಭದಲ್ಲಿ ಕೆಜೆಪಿ ಶಹರ ಘಟಕದ ಅಧ್ಯಕ್ಷ ಗಂಗಣ್ಣ ಎಲಿ, ಬಿ.ಎಂ. ಛತ್ರದ ಪುರಸಭಾ ಸದಸ್ಯರಾದ ದ್ರಾಕ್ಷಾಯಿಣಿ ಪಾಟೀಲ, ಶೋಭಾ ಕಳ್ಳಿಹಾಳ, ಪ್ರಶಾಂತ ಯಾದವಾಡ ಹಾಗೂ ಚೇತನಾ ಮೂಡ್ವಿ, ಜಿನ್ನಾ ಹಲಗೇರಿ, ಮೊದಲಾದವರು ಉಪಸ್ಥಿತರಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement