ಬಿಜೆಪಿಯಿಂದ ಹಾದಿಮನಿ ನಾಮಪತ್ರ ಸಲ್ಲಿಕೆ
ಹಾನಗಲ್ಲ: ಹಾನಗಲ್ಲ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಜಿಪಂ ಸದಸ್ಯ ಬಸವರಾಜ ಹಾದಿಮನಿ ಬುಧವಾರ ನಾಮಪತ್ರ ಸಲ್ಲಿಸಿದರು.
ಪಟ್ಟಣದ ಕುಮಾರೇಶ್ವರ ವಿರಕ್ತಮಠದಿಂದ ಬೆಂಬಲಿಗ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತಹಸೀಲ್ದಾರ್ ಕಚೇರಿಗೆ ತೆರಳಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಪಕ್ಷದ ಮುಖಂಡರಾದ ಬಿಜೆಪಿ ರಾಜ್ಯ ಕಾರ್ಯದರ್ಶಿ ಭೋಜರಾಜ ಕರೂದಿ, ತಾಲೂಕಾಧ್ಯಕ್ಷ ಜಿ.ಬಿ. ಗುಡ್ಡಪ್ಪನವರ, ಬಿ.ಎಸ್. ಕುಲಕರ್ಣಿ, ಅನಂತವಿಕಾಸ ನಿಂಗೋಜಿ, ಮಿಯ್ಯಾಜಾನ ಕಂಬಳಿ, ರವಿಕುಮಾರ ಬೆಲ್ಲದ, ಗೀತಾ ಪೂಜಾರ, ಜಗದೀಶ ಕೊಂಡೋಜಿ ಮುಂತಾದವರಿದ್ದರು.