ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ: ಯಾವಗಲ್
ಹೊಳೆಆಲೂರು: ಬಿಜೆಪಿ ಭ್ರಷ್ಟಾಚಾರದಿಂದ ಬೇಸತ್ತು ವಿವಿಧ ಪಕ್ಷಗಳ ಧುರೀಣರು, ಅಭಿಮಾನಿಗಳು ಕಾಂಗ್ರೆಸ್‌ಗೆ ಸೇರುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ನರಗುಂದ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್.ಯಾವಗಲ್ ಹೇಳಿದರು.
ಅವರು ಮಂಗಳವಾರ ಹೊಳೆಆಲೂರಿನ ಕಾಂಗ್ರೆಸ್ ಕಚೇರಿಯಲ್ಲಿ ವಿವಿಧ ಪಕ್ಷಗಳ ಯುವಕರು, ಧುರೀಣರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡು ಮಾತನಾಡಿದರು. ರಾಜ್ಯದ ಅಭಿವೃದ್ಧಿ ಕಾಂಗ್ರೆಸ್ ಪಕ್ಷದಿಂದ ಸಾಧ್ಯ ಎಂಬುದನ್ನು ಮತದಾರರು ಅರಿತುಕೊಂಡಿದ್ದಾರೆ. ಅನ್ಯ ಪಕ್ಷಗಳಲ್ಲಿ ಸಂಪೂರ್ಣ ತೊಡಗಿಕೊಂಡ ಯುವಕರಿಗೂ ಆ ಪಕ್ಷಗಳಿಂದ ಭ್ರಮನಿರಸನವಾಗಿದೆ ಎಂದು ಹೇಳಿದರು.
ಹೊಳೆಆಲೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಶರಥ ಗಾಣಿಗೇರ ಮಾತನಾಡಿದರು. ಗುರಣ್ಣ ಮನಗೂಳಿ, ಬಸವರಾಜ ಬೀರನೂರ, ಸುರೇಶ ಅಂಗಡಕಿ, ಮತ್ತಪ್ಪ ಬೆನಕಟ್ಟಿ, ಮಂಜು ಮಣ್ಣೂರ, ಬಸವರಾಜ ಮದ್ನಳ್ಳಿ, ಶರಣಪ್ಪ ಸಜ್ಜನರ, ಡಾ. ಎ.ವಿ.ಅಂಗಡಿ, ಬಾಪೂಜಿ ಗದಗ, ಮುತ್ತನಗೌಡ ಪಾಟೀಲ, ಸಂಜು ದೊಡಮನಿ, ತುಳಸಪ್ಪ ಕುಂದರಗಿ, ಶಂಕರಪ್ಪ ಕಾತರಕಿ, ಕೇದಾರಿ ಯಾದವಾಡ ಮತ್ತು ಶ್ರೀಶರಣಬಸವೇಶ್ವರ ಸಂಘದ ಅಧ್ಯಕ್ಷರು, ಸದಸ್ಯರನ್ನು ಬಿ.ಆರ್.ಯಾವಗಲ್ ಪಕ್ಷದ ಬಾವುಟ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.
ಗಣೇಶಪ್ಪ ಕಂಬಿ, ಡಿ.ಎಸ್. ಶೆಲ್ಲಿಕೇರಿ, ಡಾ. ಪ್ರಕಾಶ ಜಂಬಲದಿನ್ನಿ, ಮಲ್ಲಪ್ಪ ಸಜ್ಜನರ, ಶೇಖಣ್ಣ ಕೋಳೇರಿ, ಮಹಾಂತೇಶ ಪಾಟೀಲ, ಬಸವರಾಜ ಸಜ್ಜನರ, ಬಸನಗೌಡ ಶಿರಗುಂಪಿ, ಶ್ರೀಶೈಲಪ್ಪ ಕಾತರಕಿ, ಪ್ರವೀಣ ಶೆಲ್ಲಿಕೇರಿ, ಮಕ್ತುಂಸಾಬ ಚಿಕ್ಕಮಣ್ಣೂರ, ಯಮನೂರ ನದಾಫ, ಫಕ್ರುಸಾಬ ಅನಸೇರಿ, ನಾಸೀರ್ ಅಹ್ಮದ ಅನಸೇರಿ ಇದ್ದರು. ಫಕ್ರುಸಾಬ ಚಿಕ್ಕಮಣ್ಣೂರ ನಿರೂಪಿಸಿದರು. ಮಹಾಬಳೇಶ ಗಾಣಿಗೇರ ವಂದಿಸಿದರು.