ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಂಸ್ಕಾರ ಬೆಳೆಸುವಲ್ಲಿ ಶಿಕ್ಷಣ ಪಾತ್ರ ಪ್ರಮುಖ

Lingaraj Badiger
Updated On : 18 Apr 2013, 11:52 am

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಏ. 17
ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವಲ್ಲಿ ಶಿಕ್ಷಣದ ಪಾತ್ರ ಪ್ರಮುಖವಾಗಿದ್ದು, ಅದರ ಜೊತೆಗೆ ಪಾಲಕರ ಸಹಕಾರವೂ ಅತ್ಯವಶ್ಯವಾಗಿದೆ ಎಂದು ಅರಳೇಶ್ವರದ ಶಿಕ್ಷಕ, ಲೇಖಕ ಟಿ. ಶಿವಕುಮಾರ್ ಅಭಿಪ್ರಾಯಪಟ್ಟರು.
ಪಟ್ಟಣದ ರಾಯಲ್ ಟೆಕ್ ಕಂಪ್ಯೂಟರ್ ಕೇಂದ್ರದ 4ನೇ ವರ್ಷದ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತಾನಾಡಿದ ಅವರು, ಪ್ರಸ್ತುತ ಮಕ್ಕಳಲ್ಲಿ ಸ್ಪರ್ಧಾತ್ಮಕತೆ ಬರಬೇಕಾದರೆ ಸತತ ಪ್ರಯತ್ನಶಾಲಿಗಳಾಗಿರಬೇಕು. ಪ್ರತಿಭೆ ಇದ್ದರೆ ಮಾತ್ರ ನಮ್ಮನ್ನು ಸಮಾಜದಲ್ಲಿ ಗುರುತಿಸುತ್ತಾರೆ. ಇದನ್ನು ಅರಿತು ಮಕ್ಕಳು ಶಿಕ್ಷಣದ ಕಡೆ ಹೆಚ್ಚು ಗಮನ ಹರಿಸಬೇಕು. ರಜಾ ದಿನಗಳಲ್ಲಿ ಕಾಲಹರಣ ಮಾಡದೆ ಪಠ್ಯೇತರ, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ತೊಡಗಬೇಕೆಂದು ಹೇಳಿದರು.
ಎಲ್ಲ ಮಕ್ಕಳಲ್ಲಿ ಸೂಕ್ತ ಪ್ರತಿಭೆ ಅಡಗಿರುತ್ತವೆ. ಅದನ್ನು ಹೊರಹಾಕುಲು ಸೂಕ್ತ ವೇದಿಕೆ ಕಲ್ಪಿಸಿಕೊಡಬೇಕಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಅವರ ಪ್ರತಿಭೆಯನ್ನು ಗುರುತಿಸಿ, ಅವರ ಆಸಕ್ತಿಗೆ ತಕ್ಕಂತೆ ಪಾಲಕರು ಶಿಕ್ಷಣವನ್ನು ಕೊಡಿಸಿದರೆ ಉತ್ತಮ ಪ್ರಜೆಗಳನ್ನಾಗಿ ರೂಪಿಸಬಹುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ರಾಯಲ್ ಟೆಕ್ ಕಂಪ್ಯೂಟರ್ ಕೇಂದ್ರದ ಸ್ಥಾಪಕ ಪ್ರಶಾಂತ ಕಲಾ ಮಾತನಾಡಿ, ನಾಲ್ಕು ವರ್ಷಗಳಿಂದ ನಮ್ಮ ಸಂಸ್ಥೆ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡುತ್ತಿದೆ. ರಜೆ ಕಾಲದ ಎರಡು ತಿಂಗಳು ಕಂಪ್ಯೂಟರ್ ತರಬೇತಿಯಲ್ಲಿ ಚಿತ್ರಕಲೆ, ಆಟಗಳು, ಬೌದ್ಧಿಕ ವಿಕಸನಕ್ಕೆ ಹಲವು ವಿಷಯಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಮಕ್ಕಳು ಇದರ ಸದುಪಯೋಗ ಪಡೆಯಬೇಕೆಂದು ಹೇಳಿದರು.
ಮುತ್ತಣ್ಣ ಈಳಗೇರ, ಸಂದೀಪ ಕೊಲ್ಲಾಪುರ, ಶೋಭಾ ಗುರಣ್ಣನವರ್, ಪೌಜಿಯ ಶೇಟ್, ರಾಘು ಚವ್ಹಾಣ್, ಜೋತಿ ಪಾಟೀಲ್, ಪೂನಂ ಸಿರ್ಸಿಕರ್, ಶಿಲ್ಪಾ ಜಂಬಗೇರ, ನಿರ್ಮಲಾ ಪಾಟೀಲ, ಶೋಭಾ ಕಬರದ, ಅಕ್ಷತಾ ಪಾಟೀಲ್ ಮುಂತಾದವರು ಇದ್ದರು.
--
ಬ್ಯಾಡಗಿ: ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಬಸನಗೌಡ್ರ ಕಣಕ್ಕೆ
ಹಿರೇಕೆರೂರು: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಜಿಪಂ ಮಾಜಿ ಸದಸ್ಯ ಪಿ.ಡಿ. ಬಸನಗೌಡ್ರ ನಾಮಪತ್ರ ಸಲ್ಲಿಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ತತ್ವ, ಸಿದ್ಧಾಂತಗಳನ್ನು ಗಾಳಿಗೆ ತೂರಿ ಮನ ಬಂದಂತೆ ಟಿಕೆಟ್ ಹಂಚಿದ್ದು, ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ. 27 ವರ್ಷಗಳಿಂದ ತಾಲೂಕಿನಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಸೇವೆ ಸಲ್ಲಿಸಿದ್ದರೂ ನನ್ನನ್ನು ನಿರ್ಲಕ್ಷ್ಯ ಮಾಡಿದ್ದು ನೋವಿನ ಸಂಗತಿ ಎಂದು ವಿಷಾದಿಸಿದರು.

ಜೆಡಿಎಸ್ ಅಭ್ಯರ್ಥಿ ಮೋಹನಕುಮಾರ ನಾಮಪತ್ರ ಸಲ್ಲಿಕೆ
ಹಾನಗಲ್ಲ: ಹಾನಗಲ್ಲ ವಿಧಾನಸಭಾ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಬಿ.ಕೆ. ಮೋಹನಕುಮಾರ ಬುಧವಾರ ನಾಮಪತ್ರ ಸಲ್ಲಿಸಿದರು.
ಪಟ್ಟಣದ ಕುಮಾರೇಶ್ವರ ವಿರಕ್ತಮಠದಿಂದ ಬೆಂಬಲಿಗ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತಹಸೀಲ್ದಾರ್ ಕಚೇರಿಗೆ ತೆರಳಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಉಮೇಶ ತಳವಾರ, ಎಸ್.ಎಲ್. ಬಣಕಾರ, ವನಿತಾ ಗುತ್ತಲ, ಎನ್.ಐ. ಸವಣೂರು, ಮಾರ್ತಾಂಡ ಪಾರಗಾಂವಕರ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement