ನರೇಗಲ್ನಲ್ಲಿ ಕೆಜೆಪಿ ಅಭ್ಯರ್ಥಿ ಸಿ.ಎಂ. ಉದಾಸಿ ಪ್ರಚಾರ
ಹಾನಗಲ್ಲ: ತಾಲೂಕಿನ ನರೇಗಲ್ಲ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕೆಜೆಪಿ ಅಭ್ಯರ್ಥಿ ಸಿ.ಎಂ. ಉದಾಸಿ ಚುನಾವಣಾ ಪ್ರಚಾರ ಕೈಗೊಂಡು ಮನೆ-ಮನೆಗಳಿಗೆ ತೆರಳಿ ಮತ ಯಾಚಿಸಿದರು.
ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಹಾಗೂ ಮತದಾರರನ್ನು ಭೇಟಿ ಮಾಡಿದ ಸಿ.ಎಂ. ಉದಾಸಿ ತಾಲೂಕಿನಲ್ಲಿ ಅನುಷ್ಠಾನಗೊಂಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಶೀಲಿಸಿ ಪುನರಾಯ್ಕೆ ಮಾಡುವಂತೆ ಮನವಿ ಮಾಡಿದರು. ಬಿಂಗಾಪುರ, ಹೊಂಬಳಿ, ಮಾರನಬೀಡ, ಕಾಲ್ವೆಕಲ್ಲಾಪುರ, ನೆಲ್ಲಿಬೀಡ, ವರ್ದಿ, ನರೇಗಲ್, ಹರವಿ, ಹರನಗಿರಿ, ಕೂಡಲ, ಅಲ್ಲಾಪುರ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಕೆಜೆಪಿ ತಾಲೂಕು ಘಟಕದ ಅಧ್ಯಕ್ಷ ಎಂ.ಆರ್. ಪಾಟೀಲ, ಮುಖಂಡರಾದ ಎ.ಎಸ್.ಬಳ್ಳಾರಿ, ಮಾಲತೇಶ ಸೊಪ್ಪಿನ, ದೇವಗಿರಿ, ಶಾಂತಪ್ಪ ಶೀಲವಂತ, ನಿಂಗಪ್ಪ ಪೂಜಾರ, ಸೈಯ್ಯದಲಿ ಪಾಟೀಲ, ಬಸಣ್ಣ ಸಂಶಿ, ಎಸ್.ಜಿ. ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.