ಬಿಎಸ್ವೈ ಅಭಿವೃದ್ಧಿ ಕಾರ್ಯ ಕೆಜೆಪಿಗೆ ಶ್ರೀರಕ್ಷೆ
ಹಾನಗಲ್ಲ: ಬಿಎಸ್ವೈ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳು ಕೆಜೆಪಿ ಅಭಿವೃದ್ಧಿಗೆ ಶ್ರೀರಕ್ಷೆಯಾಗಿದ್ದು, ಭೂತ ಸದಸ್ಯರಿಗೆ ವಹಿಸಿದ ಜವಾಬ್ದಾರಿಗಳನ್ನು ಸೂಕ್ತವಾಗಿ ನಿರ್ವಹಿಸಿ ಪಕ್ಷದ ಗೆಲವಿಗೆ ಶ್ರಮಿಸಬೇಕು. ಪಟ್ಟಣದ ಸಮಗ್ರ ಅಭಿವೃದ್ಧಿ ಮಹತ್ವವನ್ನು ಮತದಾರರಿಗೆ ಮನವರಿಕೆ ಮಾಡಿಕೊಡುವಲ್ಲಿ ಕಾರ್ಯಕರ್ತರು ಕಾರ್ಯೊನ್ಮುಖರಾಗಬೇಕೆಂದು ಕೆಜೆಪಿ ಅಭ್ಯರ್ಥಿ ಸಿ.ಎಂ. ಉದಾಸಿ ಸಲಹೆ ಮಾಡಿದರು.
ಹಾನಗಲ್ಲ ಪಟ್ಟಣದ ಕೆಜೆಪಿ ಕಾರ್ಯಾಲಯದಲ್ಲಿ ಕೆಜೆಪಿ ಭೂತ್ ಮಟ್ಟದ ಕಾರ್ಯಕರ್ತರ ಸಭೆ ಹಾಗೂ ಭೂತ ಸದಸ್ಯರಿಗೆ ಮತದಾರ ಯಾದಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಗರ ಘಟಕದ ಅಧ್ಯಕ್ಷ ರಾಜು ಗೌಳಿ, ಮುಖಂಡರಾದ ಎ.ಎಸ್. ಬಳ್ಳಾರಿ, ಬಿ.ಎಸ್.ಅಕ್ಕಿವಳ್ಳಿ, ದೇವೆಂದ್ರಪ್ಪ ಮೂಡ್ಲಿ, ಎಚ್.ಎಸ್. ನಾಗಜ್ಜನವರ, ಕಲ್ಯಾಣಕುಮಾರ ಶೆಟ್ಟರ, ಎಸ್.ಕೆ. ಪೀರಜಾದೆ, ಎನ್.ಆರ್. ನವಲೆ, ಚಮನಸಾಬ ಕಿತ್ತೂರ, ಮೋಹನ ಬಸವಂತಕರ, ವಿನೋದ ಅಚಲಕರ, ಭಾಸ್ಕರ ಹುಲಮನಿ, ಮಾಲತೇಶ ಚಿಕ್ಕಣ್ಣನವರ, ರಫೀಕ ನಿಲಂಜಿ, ದೀಪಕ ಕಲಾಲ, ಅಮಿತ್ ತಿರುಮಲೆ, ಗಿರಿ ಕಲಾಲ, ಈರಣ್ಣ ಗೌಳಿ, ರವಿ ಕಲಾಲ, ಅಜ್ಜನಗೌಡ ಪಾಟೀಲ, ಚನ್ನವೀರಯ್ಯ ಹಿರೇಮಠ, ಕೆರೆಸ್ವಾಮಿ, ಮಾರುತಿ ತಾಂದಳೆ ಉಪಸ್ಥಿತರಿದ್ದರು.