ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬಿಜೆಪಿಯಿಂದ ಅರುಣಕುಮಾರ ನಾಮಪತ್ರ

Rashmi Kasaragodu
Updated On : 20 Apr 2013, 11:12 am

ರಾಣಿಬೆನ್ನೂರು: ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಅರುಣಕುಮಾರ ಪೂಜಾರ ಇತ್ತೀಚೆಗ ತಮ್ಮ ಅಪಾರ ಬೆಂಬಲಿಗರೊಂದಿಗೆ ನಗರದ ದೊಡ್ಡಪೇಟೆಯ ಬಸವೇಶ್ವರ ದೇವಸ್ಧಾನದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಮೆರವಣಿಗೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಂಜುನಾಥ ಓಲೇಕಾರ, ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಜಂಬಗಿ, ತಾಲೂಕು ಅಧ್ಯಕ್ಷ ಡಾ೤ ಬಸವರಾಜ ಕೇಲಗಾರ, ಕೃಷ್ಣಮೂರ್ತಿ ಬಣಕಾರ, ಕಿರಣ ಅಂಗಡಿ, ತಾಲೂಕಿನ ಕಮದೋಡ, ಕೂಡಿಯಾಲ ಹೋಸಪೇಟೆ, ನಲವಾಗಲ, ಕುಮಾರಪಟ್ಟಣಂ, ಕವಲೇತ್ತು, ಮಾಕನೂರು, ಚಳಗೇರಿ, ಕರೂರು, ವಿವಿಧ ಗ್ರಾಮಗಳ ಅಪಾರ ಜನ ಬೆಂಬಲಿಗರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement