ಲೈಜನ್ ಅಧಿಕಾರಿಗಳ ಆಗಮನ
ಕನ್ನಡಪ್ರಭ ವಾರ್ತೆ, ಹಾವೇರಿ. ಏ. 19
ವಿಧಾನಸಭಾ ಸಾರ್ವತ್ರಿಕ ಚುನಾವಣೆ-2013ರ ಅಂಗವಾಗಿ ಜಿಲ್ಲೆಯ ಆರು ಕ್ಷೇತ್ರಗಳಿಗೆ ಸಾಮಾನ್ಯ ಹಾಗೂ ಪೊಲೀಸ್ ವೀಕ್ಷಕರಿಗೆ ಲೈಜನ್ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.
ಹಾನಗಲ್ಲ ಕ್ಷೇತ್ರದ ಚುನಾವಣಾ ವೀಕ್ಷಕರಾದ ಅನುಗಾರ ಚೌಧರಿ(ಮೊ- 9422317120), ಅವರಿಗೆ ಲೈಸನ್ ಅಧಿಕಾರಿಯಾಗಿ ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ಮಂಜುನಾಥ(ಮೊ- 9535484676 ಹಾಗೂ 997254988) ಕಾರ್ಯನಿರ್ವಹಿಸುವರು. ಶಿಗ್ಗಾಂವ ಕ್ಷೇತ್ರದ ಚುನಾವಣಾ ವೀಕ್ಷಕರಾಗಿ ಕುಮಾರ ಬಿನೋದ ನಾರಾಯಣ ಸಿಂಗ್ (ಮೊ-9431632268), ಲೈಸನ್ ಅಧಿಕಾರಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಡಾ ಐ.ಎ. ಲೋಕಾಪುರ (ಮೊ- 9739788642). ಹಾವೇರಿ ಕ್ಷೇತ್ರ ಚುನಾವಣಾ ವೀಕ್ಷಕರಾಗಿ ಟಿ. ನಟರಾಜನ್ (ಮೊ- 9978406048), ಲೈಸನ್ ಅಧಿಕಾರಿಯಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಮಲ್ಲೇಶಪ್ಪ ಹೊರಪೇಟ (ಮೊ-94483 38806). ಬ್ಯಾಡಗಿ ಕ್ಷೇತ್ರದ ಚುನಾವಣಾ ವೀಕ್ಷಕರಾದ ಸಿ.ಟಿ. ಮಣಿ ಮೇಕಳಾಯ್ (ಮೊ- 9444266242), ಲೈಸನ್ ಅಧಿಕಾರಿ ರಾಣಿಬೆನ್ನೂರು ಎಪಿಎಂಸಿ ಕಾರ್ಯದರ್ಶಿ ಅನಿಲಕುಮಾರಿ(ಮೊ-9448685195). ಹಿರೇಕೆರೂರು ಕ್ಷೇತ್ರದ ಚುನಾವಣಾ ವೀಕ್ಷಕರಾಗಿ ಶ್ಯಾಮಕೃಷ್ಣ(ಮೊ-9838922229), ಲೈಸನ್ ಅಧಿಕಾರಿ ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕ ಆರ್.ಬಿ. ಹಿರೇಗೌಡರ(ಮೊ- 9449122223), ರಾಣಿಬೆನ್ನೂರು ಕ್ಷೇತ್ರದ ಚುನಾವಣಾ ವೀಕ್ಷಕರಾದ ರಾಮೊಂಗೋ ಲೋಥಾ(ಮೊ- 9436608373), ಲೈಸನ್ ಅಧಿಕಾರಿ ರಾಣಿಬೆನ್ನೂರು ತುಂಗಾ ಮೇಲ್ದಂಡೆ ಯೋಜನೆ ವಿಶೇಷ ಭೂಸ್ವಾಧಿನಾಧಿಕಾರಿ ಇಸ್ಮಾಯಿಲ್ ಶಿರಹಟ್ಟಿ(ಮೊ-9986468381). ಆರು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಪೊಲೀಸ್ ವೀಕ್ಷಕರಾದ ಪರಮಪಾಸಿಂಗ್ ಸಿಧು(ಮೊ-9448902374) ಲೈಸನ್ ಅಧಿಕಾರಿ ತೋಟಗಾರಿಕೆ ಇಲಾಖೆ ಚುನಾವಣಾ ವೀಕ್ಷಕರು, ಉಪನಿರ್ದೇಶಕ ಎಂ.ಬಸವರಾಜ (ಮೊ- 944899230) ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.