ಬಿಜೆಪಿಗೆ ಮತ ಹಾಕಿ: ಕೆಲಗಾರ
ರಾಣಿಬೆನ್ನೂರು: ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೂಯ್ಯಲು ಈ ಹಿಂದೆ ಬಿಜೆಪಿಗೆ ಮತ ನೀಡಿದ ರೀತಿಯಲ್ಲಿಯೇ ಈ ಬಾರಿಯೂ ಬಿಜೆಪಿಗೆ ಮತ ಹಾಕಬೇಕು ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಡಾ. ಬಸವರಾಜ ಕೆಲಗಾರ ಮತದಾರರಿಗೆ ಮನವಿ ಮಾಡಿಕೊಂಡರು. ಶುಕ್ರವಾರ ನಗರದ ಕುರುಬಗೇರಿಯ ಶ್ರೀ ಬೀರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಅವರ ಪರ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಜಂಬಗಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಂಜುನಾಥ ಓಲೇಕಾರ, ನಗರ ಬಿಜೆಪಿ ಅಧ್ಯಕ್ಷ ರಾಜು ಸುರಳಿಕೇರಿಮಠ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಈರಣ್ಣ ಅಂಗಡಿ ಇದ್ದರು.