ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಾಂಗ್ರೆಸ್ಸಿಗರಿಂದ ಸಿಎಂ ಕುರ್ಚಿಗಾಗಿ ಕಿತ್ತಾಟ

Rashmi Kasaragodu
Updated On : 23 Apr 2013, 10:44 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಏ. 22
ಕಾಂಗ್ರೆಸ್ ಮುಖಂಡರಿಗೆ ರಾಜ್ಯದ ಹಿತಕ್ಕಿಂತ ಮುಖ್ಯಮಂತ್ರಿ ಕುರ್ಚಿಯೇ ಹೆಚ್ಚಾಗಿದೆ. ಹೋದಕಡೆಗೆಲ್ಲಾ ಮುಂದಿನ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದು, ಇದು ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ಅಭ್ಯರ್ಥಿ ವಿರೂಪಾಕ್ಷಪ್ಪ ಬಳ್ಳಾರಿ ಲೇವಡಿ ಮಾಡಿದರು.
ಸೋಮವಾರ ದೇವರಗುಡ್ಡ, ಗುಡಿಹೊನ್ನತ್ತಿ, ಹಳೆಹೊನ್ನತ್ತಿ, ಹನುಮಾ ಪುರ ಹಾಗೂ ಕಾಕೋಳ ಗ್ರಾಮದಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ನಡೆಸಿ ಮಾತನಾಡಿದರು.
ಪಕ್ಷದ ತತ್ವ ಸಿದ್ಧಾಂತಗಳನ್ನು ಹೇಳಬೇಕಾದ ಕಾಂಗ್ರೆಸ್ ನಾಯಕರು, ನಾನು ಸನ್ಯಾಸಿಯಲ್ಲ, ಹೈಕಮಾಂಡ್‌ಗೆ ಬಿಟ್ಟ ತೀರ್ಮಾನ, ಈ ಬಾರಿ ದಲಿತ ಮುಖಂಡರಿಗೆ ಮುಖ್ಯಮಂತ್ರಿ ಸ್ಥಾನ ಎಂಬುದಾಗಿ ಮನಬಂದಂತೆ ವಿಶ್ಲೇಷಿಸುತ್ತಿರುವ ಅವರಿಗೆ ಜನರ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದೆಯೇ ಎಂದು ಪ್ರಶ್ನಿಸಿದರು.
ಬಿಜೆಪಿ ಜಗದೀಶ ಶೆಟ್ಟರ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದೆ. ಆದರೆ, ಕಾಂಗ್ರೆಸ್ ನಾಯಕರು ಇನ್ನೂ ಕುರ್ಚಿಯೇ ಸಿಕ್ಕಿಲ್ಲ, ಈಗಾಗಲೇ ಕಿತ್ತಾಟ ನಡೆಸಿದ್ದಾರೆ. ಇದನ್ನು ರಾಜ್ಯದ ಮತದಾರ ಆಲಿಸುತ್ತಿದ್ದಾನೆ ಎಂದರು.  ವ್ಯಕ್ತಿಗಿಂತ ಪಕ್ಷಕ್ಕೆ ನಿಷ್ಠೆ ತೋರಿದಲ್ಲಿ ರಾಜ್ಯದಲ್ಲಿ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಬಹುದಾಗಿದೆ. ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಘೋಷಿಸಿದ್ದ ಪ್ರಣಾಳಿಕೆಯಲ್ಲಿನ ಸುಮಾರು ಶೇ.70ರಷ್ಟು ಭರವಸೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದೆ ಎಂದರು. ಎಪಿಎಂಸಿ ಸದಸ್ಯ ಶಂಕರಗೌಡ ಪಾಟೀಲ ಮಾತನಾಡಿದರು. ರಾಮಣ್ಣ ಉಕ್ಕುಂದ, ಚಂದ್ರಪ್ಪ ಮುಚ್ಚಟ್ಟಿ, ಜಯಣ್ಣ ಮಲ್ಲಿಗಾರ, ಮಲ್ಲಿಕಾರ್ಜುನ ದೊಡ್ಮನಿ, ಷಣ್ಮುಖಪ್ಪ ಅಜಗೊಂಡ್ರ, ವೀರಭದ್ರಪ್ಪ ಹೊಂಬರಡಿ, ಚಂದ್ರಪ್ಪ ಆಲದಕಟ್ಟಿ, ಗ್ರಾಪಂ ಸದಸ್ಯೆ ಜಯಮ್ಮ ಬ್ಯಾಡಗಿ, ದ್ಯಾಮವ್ವ ಗುಬ್ಬಿ, ಕರಿಯಪ್ಪ ಗುಬ್ಬಿ, ಫಕ್ಕೀರವ್ವ ಗವಿಯವರ, ಮೈಲಾರಪ್ಪ ಮುದ್ದಿ, ಮಾಲತೇಶ ಆಡೂರ, ಶಿವಾಜಿ ನಾಯಕ್, ರಮೇಶ ಕರೆಆಕಳದವರ, ಶಂಬಣ್ಣ ಮಾಲದಾರ, ಗ್ರಾಪಂ ಸದಸ್ಯ ಕೋಟೆಪ್ಪ ಏಳುಕುರಿ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement