ಡಾ ಸುಮಂಗಲಾ ಬಿರುಸಿನ ಪ್ರಚಾರ
ಶಿಗ್ಗಾಂವಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ ಸುಮಂಗಲಾ ಮೈಸೂರು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಕ್ಷೇತ್ರದ ಕುಣಿಮೆಳ್ಳಿಹಳ್ಳಿ ಗ್ರಾಮದಲ್ಲಿ ಮಹಿಳೆಯರನ್ನು ಉದ್ದೇಶಿಸಿ ಮಾತಾಡಿದ ಅವರು, ರಾಜ್ಯದಲ್ಲಿ ಸುಸ್ಥಿರ ಸರ್ಕಾರ ರಚನೆ ಜೆಡಿಎಸ್ನಿಂದ ಮಾತ್ರ ಸಾಧ್ಯ ಎಂದರು. ಗ್ರಾಮದ ಯುವಕರು ತಮ್ಮ ಸಮಸ್ಯೆಗಳನ್ನು ನಿವೇದಿಸಿಕೊಂಡಾಗ ಪರಿಹರಿಸುವ ಭರವಸೆ ನೀಡಿದರು. ಹಳೆಮನ್ನಂಗಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸಿದ ಸುಮಂಗಲಾ ಅವರಿಗೆ ಯುವ ಸಂಘಟನೆಗಳು ಹಾಗೂ ಮಹಿಳಾ ಸ್ವಸಹಾಯ ಸಂಘಗಳು ಭಾರಿ ಬೆಂಬಲ ಸೂಚಿಸಿದವು. ಸಂಘದ ಮಹಿಳಾ ಪ್ರತಿನಿಧಿಗಳು ಅಭ್ಯರ್ಥಿಯ ಜತೆ ಪಾದಯಾತ್ರೆಯಲ್ಲಿ ತೆರಳಿ, ಪ್ರಚಾರದಲ್ಲಿ ಭಾಗವಹಿಸಿದರು. ನಿಡಗುಂದಿಯಲ್ಲಿ ಕಾಲಿನ ಶಕ್ತಿ ಕಳೆದುಕೊಂಡು ವಿಚಿತ್ರ ರೋಗದಿಂದ ಬಳಲುತ್ತಿದ್ದ ಬಸವಣ್ಣೆಪ್ಪ ಶಾಬಾಳದಾರ ಎಂಬುವರಗೆ ಡಾ ಸುಮಂಗಲಾ ಚಿಕಿತ್ಸೆ ನೀಡಿದರು. ಮಹಿಳಾ ಸ್ವಸಹಾಯ ಸಂಘ ಮತ್ತು ಯುವಕ ಸಂಘಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿ, ಜೆಡಿಎಸ್ ಬೆಂಬಲಿಸುವಂತೆ ಮನವಿ ಮಾಡಿದರು. ಸಿಂಗಾಪುರ, ಹುರಳಿಕೊಪ್ಪಿ ಹನುಮನಹಳ್ಳಿ ಮತ್ತು ಹೂನಾಪುರ ಗ್ರಾಮಗಳಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದರು ತಾಲೂಕು ಜೆಡಿಎಸ್ ಅಧ್ಯಕ್ಷ ಪ್ರಕಾಶ ಬಾರಕೇರ, ರೇಡಪ್ಪ ಬಸನಾಳ, ಬಾಬಾಜಾನ ಪಟೇಲ, ಶಂಕ್ರಮ್ಮ ತಿಮ್ಮಿನಹಳ್ಳಿ ಹಾಗೂ ಅಫರಾಬಿ ರೆಹಮಾನವರ ಭಾಗವಹಿಸಿದ್ದರು.