ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ತಡಸ ಅಭೂತಪೂರ್ವ ಅಭಿವೃದ್ಧಿ

Rashmi Kasaragodu
Updated On : 24 Apr 2013, 11:04 am

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಏ. 23
ತಾಲೂಕಿನ ಅರೆಮಲೆನಾಡಿನಲ್ಲಿ ಬೆಳೆಯುವ ಭತ್ತದ ಸಂರಕ್ಷಣೆಗಾಗಿ 2010-11ನೇ ಸಾಲಿನಲ್ಲಿ ಆರು ಸಾವಿರ ಹೆಕ್ಟರ್ ಪ್ರದೇಶವನ್ನು ಜಲಾನಯನ ಇಲಾಖೆಯಿಂದ ಅಭಿವೃದ್ಧಿಪಡಿಸಲಾಗಿದೆ ಎಂದು ಬಿಜೆಪಿ ಅಭ್ಯರ್ಥಿಯೂ ಆಗಿರುವ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ತಡಸ ಗ್ರಾಮದಲ್ಲಿ ಮಂಗಳವಾರ ಚುನಾವಣೆ ಪ್ರಚಾರ ಕಾರ್ಯ ನಡೆಸಿದ ಅವರು, ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೆರೆಗಳ ಒಡ್ಡು ನಿರ್ಮಾಣ, ಗದ್ದೆಗಳ ಅಭಿವೃದ್ಧಿ ಮತ್ತು ಭೂಮಿ ನೆಲದ ಸಮತಟ್ಟು ಕಾಪಾಡಲು ಈ ಯೋಜನೆ ಅತ್ಯಂತ ಪೂರಕವಾಗಿ ಪರಿಣಮಿಸಿದೆ ಎಂದ ಅವರು, ಈ ಯೋಜನೆ ಅನುಷ್ಠಾನದಿಂದ ರೈತರ ಹೊಲಗಳಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದೂ ಹೇಳಿದರು.
ನೀರು ಬಳಕೆದಾರರ ಸಂಘ ಸ್ಥಾಪಿಸಿ ಸಾಮೂಹಿಕ ಕೃಷಿ ಪದ್ಧತಿ ಅಳವಡಿಸಲಾಗಿದೆ. ಬೆಣ್ಣೆ ಹಳ್ಳ ಪುನಶ್ಚೇತನ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದರಿಂದ ಹೊಸೂರ-ಯತ್ನಿಹಳ್ಳಿ ಗ್ರಾಮಗಳ ರೈತರಿಗೆ ನೀರಾವರಿ ಸೌಲಭ್ಯ ದೊರಕಲಿದೆ ಎಂದರು.
ನೆರೆ ಹಾವಳಿಯಿಂದ ರಕ್ಷಣೆ ಪಡೆಯಲು ಕ್ರಮಕೈಗೊಳ್ಳಲಾಗಿದೆ. ತಡಸ ಗ್ರಾಮದ ಮುಸ್ಲಿಂ ಸಮಾಜ ಬಾಂಧವರ ಬಹುದಿನಗಳ ಬೇಡಿಕೆಯಾಗಿದ್ದ ಉರ್ದು ಶಾಲೆ ಸ್ಥಾಪಿಸಲಾಗಿದೆ. ಸುವರ್ಣ ಗ್ರಾಮ ಯೋಜನೆಯಡಿ ಗ್ರಾಮದ ಎಲ್ಲ ರಸ್ತೆಗಳನ್ನು ಕಾಂಕ್ರಿಟ್ ನಿರ್ಮಿಸಲಾಗಿದೆ ಎಂದು ಹೇಳಿದರು.
ಹೊನ್ನಾಪುರ ಕೆರೆಯಿಂದ ತಡಸ-ಅಡವಿಸೋಮಾಪುರ ಗ್ರಾಮಸ್ಥರಿಗೆ ಶಾಶ್ವತ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರದ ಒಪ್ಪಿಗೆ ದೊರಕಿದ್ದು, ಚುನಾವಣೆ ನಂತರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದೆಂದರು.
ಇದಕ್ಕೂ ಮೊದಲು ಗ್ರಾಮದಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರೊಂದಿಗೆ ಮನೆ-ಮನೆಗೆ ತೆರಳಿ ಮತಯಾಚಿಸಿದ ಬೊಮ್ಮಾಯಿ, ತಾವು 5 ವರ್ಷದ ಅವಧಿಯಲ್ಲಿ ಕ್ಷೇತ್ರಾದ್ಯಂತ ಕೈಗೊಂಡಿರುವ ಅಭಿವೃದ್ಧಿ ಕಾರ್ಯ ಗಮನಿಸಿ ತಮ್ಮ ಪರವಾಗಿ ಮತ ಚಲಾಯಿಸುವಂತೆ ವಿನಂತಿಸಿಕೊಂಡರು.
ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಬಿಜೆಪಿ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ಜಿಪಂ ಸದಸ್ಯ ಸಿ.ಎಸ್. ಪಾಟೀಲ, ತಾಪಂ ಉಪಾಧ್ಯಕ್ಷ ಸುಗಂದಬಾಯಿ ಘೋಡಕೆ, ಕಿರಣ ಅವರಾಧಿ, ಗ್ರಾಪಂ ಮಾಜಿ ಅಧ್ಯಕ್ಷ ಜೆ.ಸಿ. ವಾರದ, ಪ್ರಶಾಂತ ಮಹಾಜನಶೆಟ್ಟರ, ಯುವ ಮೋರ್ಚಾ ಅಧ್ಯಕ್ಷ ಬಸವರಾಜ ನಾರಾಯಣಪು, ಬಂಕಾಪುರ ಪುರಸಭೆ ಸದಸ್ಯ ಹೊನ್ನಪ್ಪ ಹೂಗಾರ ಮತ್ತಿತರರು ಪಾಲ್ಗೊಂಡಿದ್ದರು.


ಕೆರೆಗಳ ಒಡ್ಡು ನಿರ್ಮಾಣ, ಗದ್ದೆಗಳ ಅಭಿವೃದ್ಧಿ ಮತ್ತು ಭೂಮಿ ನೆಲದ ಸಮತಟ್ಟು ಕಾಪಾಡಲು ಈ ಯೋಜನೆ ಅತ್ಯಂತ ಪೂರಕವಾಗಿ ಪರಿಣಮಿಸಿದೆ ಎಂದ ಅವರು, ಈ ಯೋಜನೆ ಅನುಷ್ಠಾನದಿಂದ ರೈತರ ಹೊಲಗಳಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಲಾಗಿದೆ. ನೀರು ಬಳಕೆದಾರರ ಸಂಘ ಸ್ಥಾಪಿಸಿ ಸಾಮೂಹಿಕ ಕೃಷಿ ಪದ್ಧತಿ ಅಳವಡಿಸಲಾಗಿದೆ. ಬೆಣ್ಣೆ ಹಳ್ಳ ಪುನಶ್ಚೇತನ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದರಿಂದ ಹೊಸೂರ-ಯತ್ನಿಹಳ್ಳಿ ಗ್ರಾಮಗಳ ರೈತರಿಗೆ ನೀರಾವರಿ ಸೌಲಭ್ಯ ದೊರಕಲಿದೆ.
ಣ ಬಸವರಾಜ ಬೊಮ್ಮಾಯಿ, ಜಲ ಸಂಪನ್ಮೂಲ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement