ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಭಿವೃದ್ಧಿ ಕಾರ್ಯಕ್ಕಾಗಿ ಕೆಜೆಪಿ ಬೆಂಬಲಿಸಿ

Rashmi Kasaragodu
Updated On : 25 Apr 2013, 11:48 am

ಹಾವೇರಿ: ಕಳೆದ ಬಾರಿ ಚುನಾವಣೆಯಲ್ಲಿ ಆಯ್ಕೆಗೊಂಡ ನಂತರ ಕ್ಷೇತ್ರದ ಅಭಿವೃದ್ಧಿ ಸಾಕಷ್ಟು ಶ್ರಮಿಸಿದ್ದೇನೆ. ಮಾಜಿ ಸಿಎಂ ಬಿಎಸ್ವೈ ಅವರ ಕೈ ಬಲಪಡಿಸುವ ಮೂಲಕ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಕೆಜೆಪಿಗೆ ಬೆಂಬಲಿಸಿ ಎಂದು ನೆಹರು ಓಲೇಕಾರ ಮತದಾರರಲ್ಲಿ ಮನವಿ ಮಾಡಿದರು.
ಹಾವೇರಿ (ಮೀಸಲು) ವಿಧಾನಸಭೆ ಮತಕ್ಷೇತ್ರದ ಕೆಜೆಪಿ ಅಭ್ಯರ್ಥಿ ನೆಹರು ಓಲೇಕಾರ ಅಪಾರ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಕ್ಷೇತ್ರಾದ್ಯಂತ ಬುಧವಾರ ತುರುಸಿನ ಪ್ರಚಾರ ಕಾರ್ಯ ನಡೆಸಿದರು.
ಪ್ರಚಾರದುದ್ದಕ್ಕೂ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ ಮತದಾರರು, ಪ್ರಸಕ್ತ ಚುನಾವಣೆಯಲ್ಲಿ ಕಳೆದ ಬಾರಿಗಿಂತಲೂ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲವು ತಂದುಕೊಡಲು ಶ್ರಮಿಸುವುದಾಗಿ ಓಲೇಕಾರ ಅವರಿಗೆ ಭರವಸೆ ನೀಡಿದ್ದು ವಿಶೇಷವಾಗಿತ್ತು.
ಉರಿ ಬಿಸಿಲನ್ನು ಲೆಕ್ಕಿಸದೇ ಬೆಳಗ್ಗೆಯಿಂದಲೇ ಪಾದಯಾತ್ರೆ ಮೂಲಕ ಪ್ರಚಾರ ಕಾರ್ಯ ನಡೆಸಿದ ಓಲೇಕಾರ ಹಾಗೂ ಅವರ ಬೆಂಬಲಿಗರು, ಹಾವನೂರು, ಬೆಳಗನಾಥ, ಬೆಳವಗಿ, ಮರೋಳ, ಕೊಡಬಾಳ, ನೆಗಳೂರು ಸೇರಿದಂತೆ ಸುತ್ತಲಿನ 10ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರಚಾರ ಕಾರ್ಯ ನಡೆಸುವ ಮೂಲಕ ಕೆಜೆಪಿ ಚಿಹ್ನೆ ತೆಂಗಿನಕಾಯಿಗೆ ಮತ ನೀಡುವಂತೆ ವಿನಂತಿಸಿಕೊಂಡರು.
ಓಲೇಕಾರ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ ಎಂಬ ಸುದ್ದಿ ತಿಳಿದುಕೊಂಡಿದ್ದ ಕೆಲವರು, ಆಯಾ ಹಳ್ಳಿಗಳಿಗೆ ಪ್ರಚಾರದ ದಂಡು ಆಗಮಿಸಿದ್ದೇ ತಡ, ಅಭ್ಯರ್ಥಿಗೆ ಅದ್ದೂರಿ ಸ್ವಾಗತ ಕೋರಿದರಲ್ಲದೇ, ಶಾಸಕರಾಗಿದ್ದ ಸಂದರ್ಭದಲ್ಲಿ ತಮಗೆ ಸೂರು ಕಲ್ಪಿಸಿಕೊಟ್ಟಿದ್ದರ ಬಗ್ಗೆಯೂ ಸಂತೃಪ್ತಿ ವ್ಯಕ್ತಪಡಿಸಿದರು. ಯಾವುದೇ ರಾಜಕೀಯ ಪಕ್ಷಗಳು ಎಂತಹದ್ದೆ ಆಮಿಷವೊಡ್ಡಿದರೂ ಅದಕ್ಕೆ ಒಳಗಾಗದೇ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ತಮಗೆ ನಮ್ಮ ಮತ ಎಂದು ಜನತೆ ಅಭಯ ನೀಡಿದ್ದು, ಕೆಜೆಪಿ ಕಾರ್ಯಕರ್ತರಲ್ಲಿ ಹರ್ಷದ ಹೊನಲು ಹರಿಸುವಂತೆ ಮಾಡಿತು.
ವೆಂಕಣ್ಣಾ ಚಪ್ಪರದ, ಅಪ್ಪಣ್ಣಾ ಅರಳಿ, ಅಶೋಕ ಮಂಚರೆಡ್ಡೇರ್, ಮಾಲತೇಶ ಬನ್ನಿಹಟ್ಟಿ, ಉಮೇಶ, ನಿಂಗಣ್ಣ ಮೈಲಾರ, ಉಮೇಶ ಬಣಕಾರ ಇದ್ದರು.


ಯಾವುದೇ ರಾಜಕೀಯ ಪಕ್ಷಗಳು ಎಂತಹದ್ದೆ ಆಮಿಷವೊಡ್ಡಿದರೂ ಅದಕ್ಕೆ ಒಳಗಾಗದೆ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ತಮಗೆ ನಮ್ಮ ಮತ ಎಂದು ಜನತೆ ಅಭಯ ನೀಡಿದ್ದು, ಕೆಜೆಪಿ ಕಾರ್ಯಕರ್ತರಲ್ಲಿ ಹರ್ಷದ ಹೊನಲು ಹರಿಸುವಂತೆ ಮಾಡಿತು.
- ನೆಹರು ಓಲೇಕಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement